ಕಬ್ಬಿನ ಹಾಲು ಕುಡಿಯುವ ಮುನ್ನ ಮಿಸ್ ಮಾಡದೇ ಮಾಹಿತಿ ನೋಡಿ!

ಬಿಸಿಲಿನ ಧಗೆಯಿಂದ ದಣಿವಾರಿಸಿಕೊಳ್ಳಲು ತಂಪಾದ ಕಬ್ಬಿನ ಹಾಲಿಗಿಂತ ರುಚಿಕರ ಮತ್ತು ಆರೋಗ್ಯಕರ ಪಾನೀಯ ಇನ್ನೊಂದಿಲ್ಲ. ಈ ರಸ ಅತಿ ಪೌಷ್ಟಿಕ ಹಾಗೂ ಒಂದಕ್ಕಿಂತ ಹೆಚ್ಚು ವಿಧದಲ್ಲಿ ಆರೋಗ್ಯವನ್ನು ವೃದ್ದಿಸುವ ಪಾನೀಯವೂ ಆಗಿದೆ. ಅಚ್ಚರಿ ಎಂದರೆ, ಬೇಸಿಗೆಯಲ್ಲಿ ಇದರ ಸೇವನೆಯಿಂದ ದೇಹ ತಂಪಾದರೆ ಚಳಿಗಾಲದಲ್ಲಿ ಇದರ ಸೇವನೆಯಿಂದ ದೇಹ ಬೆಚ್ಚಗಾಗುತ್ತದೆ! ಆಲ್ಲದೇ ಕಬ್ಬಿನ ಹಾಲಿನ ಸೇವನೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಪ್ರಸ್ತುತ ದಿನಗಳಲ್ಲಿ ಈ ಶಕ್ತಿ ಅತಿ ಹೆಚ್ಚಾಗಿ ಅಗತ್ಯವಾಗಿದೆ. ಸಿಹಿಯಾಗಿದ್ದರೂ, ಕಬ್ಬಿನ ಹಾಲಿನಲ್ಲಿ ಕ್ಯಾಲೋರಿಗಳು ಕಡಿಮೆಯೇ ಇವೆ.

ಕಬ್ಬಿನ ಹಾಲಿನೊಂದಿಗೆ ಕೊಂಚ ಲಿಂಬೆ, ಶುಂಠಿ ಮತ್ತು ಕಲ್ಲುಪ್ಪನ್ನು ಬೆರೆಸಿದರೆ ಇದರ ರುಚಿ ಅಸದಳವಾಗುತ್ತದೆ ಹಾಗೂ ಈ ಸಾಮಾಗ್ರಿಗಳ ಪೋಷಕಾಂಶಗಳೂ ಬೆರೆತು ಪಾನೀನ ಇನ್ನಷ್ಟು ಶಕ್ತಿಯುತವಾಗುತ್ತದೆ. ಕಬ್ಬಿನ ಹಾಲಿನಲ್ಲಿ ಉತ್ತಮ ಪ್ರಮಾಣದ ಕರಗುವ ನಾರಿನಂಶವಿದೆ. ಪರಿಣಾಮವಾಗಿ ಜೀರ್ಣಕ್ರಿಯೆ ಸುಲಭವಾಗುವ ಜೊತೆಗೇ ಕಾಮಾಲೆ ರೋಗ, ರಕ್ತಹೀನತೆ ಮತ್ತು ಆಮ್ಲೀಯತೆ ಎದುರಾಗುವುದನ್ನೂ ತಡೆಯುತ್ತದೆ. ಅಲ್ಲದೇ ದೇಹವನ್ನು ತಂಪಗಾಗಿಸುತ್ತದೆ ಮತ್ತು ಗ್ಯಾಸ್ಟ್ರಿಕ್ ರಸಗಳ ಸ್ರವಿಕೆಗೂ ಪ್ರಚೋದನೆ ನೀಡುತ್ತದೆ.

ಕಬ್ಬಿನ ಹಾಲಿನ ಸೇವನೆಯಿಂದ ಲಭಿಸುವ ಕೆಲವು ಪ್ರಯೋಜನಗಳು ಇಲ್ಲಿವೆ:

​ಮಧುಮೇಹಿಗಳಿಗೂ ಒಳ್ಳೆಯದು

ಸಾಮಾನ್ಯವಾಗಿ ಮಧುಮೇಹಿಗಳು ಸಕ್ಕರೆ ತಿನ್ನುವುದಿಲ್ಲ, ಆದರೆ, ಕಬ್ಬಿನ ಹಾಲು ಇದಕ್ಕೆ ಅಪವಾದ. ಕಬ್ಬಿನ ಹಾಲಿನಲ್ಲಿ ಸಕ್ಕರೆ ಇದ್ದರೂ ಇದು ನೈಸರ್ಗಿಕವಾಗಿದೆ ಹಾಗೂ ಮಿತ ಪ್ರಮಾಣದಲ್ಲಿದ್ದು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಧಿಡೀರನೇ ಏರಿಸುವುದಿಲ್ಲ. ಆದ್ದರಿಂದ ಮಿತ ಪ್ರಮಾಣದಲ್ಲಿ ಮಧುಮೇಹಿಗಳೂ ಸೇವಿಸಬಹುದು.

​ಯಕೃತ್ ಆರೋಗ್ಯಕ್ಕೂ ಒಳ್ಳೆಯದು
ಕಬ್ಬಿನ ಹಾಲು ಯಕೃತ್ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಅತ್ಯುತ್ತಮ ಆಹಾರವಾಗಿದೆ ಹಾಗೂ ಕಾಮಾಲೆ ರೋಗಿಗಳಿಗಂತೂ ಕಬ್ಬಿನ ಹಾಲು ದಿನವೂ ಮೂರು ಬಾರಿ ಕುಡಿಯಬೇಕಾದ ಔಷಧಿಯೂ ಆಗಿದೆ. ಉಳಿದವರಲ್ಲಿ ಯಕೃತ್ ಕ್ಷಮತೆ ಹೆಚ್ಚಿಸಲು ಹಾಗೂ ಕಾಯಿಲೆಗಳಿಂದ ಶೀಘ್ರ ಗುಣಹೊಂದಲು ನೆರವಾಗುತ್ತದೆ.

​ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಇಂದಿನ ಸಾಂಕ್ರಾಮಿಕ ರೋಗದ ಹಾವಳಿಯಿಂದ ತಪ್ಪಿಸಿಕೊಳ್ಳಲು ರೋಗ ನಿರೋಧಕ ಶಕ್ತಿ ಎಷ್ಟು ಪ್ರಬಲವಿದ್ದರೂ ಸಾಲದು. ನಿಯಮಿತವಾಗಿ ಒಂದು ಲೋಟ ಕಬ್ಬಿನ ಹಾಲನ್ನು ಸೇವಿಸುತ್ತಾ ಬಂದರೆ ಹಲವಾರು ವೈರಸ್ ಸಂಬಂಧಿತ ರೋಗಗಳಿಂದ ರಕ್ಷಣೆ ಪಡೆಯಬಹುದು.

​ತೂಕ ಇಳಿಕೆಗೆ ನೆರವಾಗುತ್ತದೆ

ಕಬ್ಬಿನ ಹಾಲಿನಲ್ಲಿ ಅಧಿಕ ಪ್ರಮಾಣದಲ್ಲಿರುವ ಕರಗುವ ನಾರಿನಂಶದ ಕಾರಣ ಇದರ ಸೇವನೆಯ ಬಳಿಕ ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಅಹಾರ ಸೇವನೆಯಿಂದ ತಡೆಯುತ್ತದೆ ಹಾಗೂ ತೂಕ ಇಳಿಕೆಯ ಪ್ರಯತ್ನಗಳಿಗೆ ಹೆಚ್ಚಿನ ಬೆಂಬಲ ದೊರಕುತ್ತದೆ. ಅಲ್ಲದೇ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟಗಳನ್ನು ತಗ್ಗಿಸಿ ಹೃದಯವನ್ನು ಆರೋಗ್ಯಕರವಾಗಿ ಇರಿಸುತ್ತದೆ.

​ತ್ವಚೆಯ ಕಾಂತಿ ಹೆಚ್ಚುತ್ತದೆ

ಕಬ್ಬಿನ ಹಾಲಿನ ಸೇವನೆಯಿಂದ ತ್ವಚೆಯ ಬುಡಕ್ಕೆ ಉತ್ತಮ ಪೋಷಣೆ ದೊರಕುತ್ತದೆ ಹಾಗೂ ಮೊಡವೆಗಳು ಶೀಘ್ರವೇ ಇಲ್ಲವಾಗುತ್ತವೆ. ಇದರಲ್ಲಿ ಸುಕ್ರೋಸ್ ಎಂಬ ಸಕ್ಕರೆಯಿದ್ದು ಗಾಯಗಳನ್ನು ಶೀಘ್ರವಾಗಿ ಮಾಗಿಸಲು ನೆರವಾಗುತ್ತದೆ. ಅಲ್ಲದೇ ಹಳೆಯ ಕಲೆಗಳನ್ನು ನಿವಾರಿಸಲು ಮತ್ತು ದೇಹದಿಂದ ಕಲ್ಮಶಗಳನ್ನು ನಿವಾರಿಸಲೂ ನೆರವಾಗುತ್ತದೆ.

ಮೂಳೆಗಳನ್ನು ಗಟ್ಟಿಯಾಗಿಸುತ್ತದೆ

ಕಬ್ಬಿನ ಹಾಲಿನಲ್ಲಿ ಕ್ಯಾಲ್ಸಿಯಂ, ಮೆಗ್ನೀಶಿಯಂ, ಕಬ್ಬಿಣ, ಪೊಟ್ಯಾಶಿಯಂ ಹಾಗೂ ರಂಜಕದ ಸಹಿತ ಹಲವಾರು ಖನಿಜಗಳಿವೆ. ಇವೆಲ್ಲವೂ, ವಿಶೇಷವಾಗಿ ಕ್ಯಾಲ್ಸಿಯಂ ಮೂಳೆಗಳು ದೃಢವಾಗಲು ನೆರವಾಗುತ್ತವೆ.

ಕಬ್ಬಿನ ಹಾಲನ್ನು ಹಾಗೇ ಕುಡಿಯುವ ಬದಲು 2/3 ಕಪ್ ಕಬ್ಬಿನ ಹಾಲಿಗೆ ತಲಾ 1 ಚಮಚ ನಿಂಬೆ ರಸ, ಶುಂಠಿ ರಸ, ಎಳನೀರು (1/3 ಕಪ್) ಸೇರಿಸಿ ಕುಡಿದರೆ ಇದರಷ್ಟು ರುಚಿಕರ ಮತ್ತು ಆರೋಗ್ಯಕರ ಆಹಾರ ಇನ್ನೊಂದಿರಲಾರದು. ತಜ್ಞರ ಪ್ರಕಾರ ದಿನಕ್ಕೆ ಎರಡು ದೊಡ್ಡ ಲೋಟದಷ್ಟು ಕಬ್ಬಿನ ಹಾಲನ್ನು ಕುಡಿದರೆ ಬೇಕಾದಷ್ಟಾಯಿತು. ಇದನ್ನೂ ಹೆಚ್ಚಿನ ಪ್ರಮಾಣವನ್ನು ಸೇವಿಸದಿರಿ.

Related Post

Leave a Comment