ವೇಗವಾಗಿ ಸಣ್ಣ ಆಗಲು!ತೂಕ ಇಳಿಸಲು ಬೊಜ್ಜು ಕರಗಿಸುವ ಮನೆಮದ್ದು.ತೂಕ ಕಡಿಮೆ ಮಾಡುವ ವಿಧಾನ!

 
ದೇಹ ತೂಕ ಹೆಚ್ಚಾಗುವುದು ಒಂದು ರೋಗವಲ್ಲ, ಆದರೆ ಇದು ಅನೇಕ ರೋಗಗಳಿಗೆ ಮೂಲ. ಒಮ್ಮೆ ದೇಹ ತುಕ ಹೆಚ್ಚಾದರೆ ಅದನ್ನು ನಿಯಂತ್ರಿಸುವುದು ಬಹಳ ಕಷ್ಟ. ಇದರಿಂದ ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯಾಘಾತ, ಹೃದಯ ವೈಫಲ್ಯ, ಪರಿಧಮನಿಯ ಕಾಯಿಲೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

 ಬೊಜ್ಜು ಇತ್ತೀಚಿನ ಯುವ ಜನತೆ ಎದುರಿಸುವ ಬಹು ದೊಡ್ಡ ಸಮಸ್ಯೆ. ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಯುವಕ ಯುವತಿಯರು ಎದುರಿಸುವ ಸಮಸ್ಯೆ ಇದಾಗಿದೆ. ದೇಹ ತೂಕ ಹೆಚ್ಚಾಗುವುದು ಒಂದು ರೋಗವಲ್ಲ, ಆದರೆ ಇದು ಅನೇಕ ರೋಗಗಳಿಗೆ ಮೂಲ. ಒಮ್ಮೆ ದೇಹ ತೂಕ ಹೆಚ್ಚಾದರೆ ಅದನ್ನು ನಿಯಂತ್ರಿಸುವುದು ಬಹಳ ಕಷ್ಟ. ಆದರೆ ಸಮಯಕ್ಕೆ ಸರಿಯಾಗಿ ಇದನ್ನು ನಿಯಂತ್ರಿಸದೆ ಹೋದಲ್ಲಿ   ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಹೃದಯಾಘಾತ, ಹೃದಯ ವೈಫಲ್ಯ, ಪರಿಧಮನಿಯ ಕಾಯಿಲೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ, ದೇಹ ತೂಕ ಹೆಚ್ಚಾಗುವುದು ದೇಹದ ಆಕಾರವನ್ನು ಕೂಡಾ ಹಾಳುಮಾಡುತ್ತದೆ. 

ತೂಕವನ್ನು ಕಳೆದುಕೊಳ್ಳಲು ಈ ವ್ಯಾಯಾಮ ಮಾಡಿ :
ತೂಕವನ್ನು ಕಳೆದುಕೊಳ್ಳುವುದು ಎಂದರೆ ಮಕ್ಕಳಾಟವಲ್ಲ. ಕಟ್ಟುನಿಟ್ಟಾದ ಆಹಾರ ಕ್ರಮ ಮತ್ತು ಕಠಿಣ ವ್ಯಾಯಾಮವನ್ನು ಅನುಸರಿಸಬೇಕಾಗುತ್ತದೆ. ಇಂದಿನ ಬ್ಯುಸಿ ಲೈಫ್ ಸ್ಟೈಲ್ ನಲ್ಲಿ ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸಲು ಎಲ್ಲರಿಗೂ  ಸಮಯವಿರುವುದಿಲ್ಲ. ಅಲ್ಲದೆ ಜಿಮ್ ಬಹಳಷ್ಟು ದುಬಾರಿ ಕೂಡಾ. ಹೀಗಿರುವಾಗ ಕಡಿಮೆ ಹಣ ಖರ್ಚು ಮಾಡಿ, ತೂಕ ಇಳಿಸಿಕೊಳ್ಳಲು ಬಯಸುವುದಾದರೆ ಸ್ಕಿಪ್ಪಿಂಗ್ ಪ್ರಾರಂಭಿಸಿ. 

ಸ್ಕಿಪ್ಪಿಂಗ್ ಮೂಲಕ ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು : 
ನಮ್ಮಲ್ಲಿ ಹಲವರು ನಾವು ಚಿಕ್ಕವರಿದ್ದಾಗ ಸ್ಕಿಪ್ ಮಾಡುತ್ತಿದ್ದಿರಬಹುದು. ಆದರೆ ಕಾಲ ಕಳೆಯುತ್ತಿದ್ದಂತೆ ಆ ಅಭ್ಯಾಸವೇ ಬಿಟ್ಟು ಹೋಗಿರುತ್ತದೆ. ಆದರೆ, ಈಗ ಮತ್ತೆ ಆ ಬಾಲ್ಯದ ಆಟವನ್ನು ಮೈಗೂಡಿಸಿಕೊಳ್ಳಬಹುದು. ಪ್ರತಿದಿನ 20 ರಿಂದ 25 ನಿಮಿಷಗಳ ಕಾಲ ನಿಯಮಿತವಾಗಿ ಸ್ಕಿಪ್ಪಿಂಗ್ ಮಾಡಿದರೆ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ವೇಗವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ ಎನ್ನವುದು ಫಿಟ್‌ನೆಸ್ ತಜ್ಞರ ಅಭಿಪ್ರಾಯ. ಹೀಗೆ ಮಾಡುವುದರಿಂದ ಪ್ರತಿದಿನ 200 ರಿಂದ 300 ಕ್ಯಾಲೊರಿಗಳನ್ನು ಬರ್ನ್ ಮಾಡುವುದು ಸಾಧ್ಯವಾಗುತ್ತದೆ. 

ಸ್ಕಿಪ್ಪಿಂಗ್‌ನ ಇತರ ಪ್ರಯೋಜನಗಳು :

  1. ಪ್ರತಿದಿನ ಸ್ಕಿಪ್ ಮಾಡುವ ಜನರು ಉತ್ತಮ ರಕ್ತ ಪರಿಚಲನೆಯನ್ನು ಹೊಂದಿರುತ್ತಾರೆ.
  2. ಈ ವ್ಯಾಯಾಮದಿಂದ ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು.
  3. ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಪ್ರಯೋಜನಕಾರಿ. 
  4. ಸ್ಕಿಪ್ಪಿಂಗ್ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
  5. ಸಣ್ಣ ವಯಸ್ಸಿನಲ್ಲಿಯೇ ಸ್ಕಿಪ್ ಮಾಡಿದರೆ ಎತ್ತರ ಹೆಚ್ಚುತ್ತದೆ ಎಂದು ಕೂಡಾ ಹೇಳಲಾಗುತ್ತದೆ. 

ಸಂಸ್ಕರಿಸಿದ ಕಾರ್ಬೋಹೈಡ್ರೆಟ್‍ಗಳನ್ನು ಕಡಿಮೆ ಮಾಡಿ

ಸಕ್ಕರೆ ಮತ್ತು ಸ್ಟಾರ್ಚ್ ಅಥವಾ ಕಾರ್ಬೋಹೈಡ್ರೇಟ್‌ ಕಡಿತಗೊಳಿಸುವುದು ಬೇಗ ತೂಕ ಇಳಿಸುವ ಸುಲಭ ವಿಧಾನ. ಅದು ಕಡಿಮೆ ಕಾರ್ಬ್‍ಗಳನ್ನು ತಿನ್ನುವ ಕ್ರಮವಾಗಿರಬಹುದು ಅಥವಾ ಸಂಸ್ಕರಿಸಿದ ಕಾರ್ಬ್‍ಗಳನ್ನು ಕಡಿತಗೊಳಿಸಿ. ಬದಲಿಗೆ ಧಾನ್ಯಗನ್ನು ತಿನ್ನುವುದಾಗಿರಬಹುದು. ಕಡಿಮೆ ಕಾರ್ಬ್ ಆಹಾರ ಕ್ರಮ ಹಸಿವನ್ನು ಕಡಿಮೆ ಮಾಡುತ್ತದೆ ಮತ್ತು ಆ ಮೂಲಕ ಕಡಿಮೆ ಕ್ಯಾಲೋರಿಗಳನ್ನು ತಿನ್ನುವಂತೆ ಮಾಡುತ್ತದೆ ಎಂಬುವುದು ಅಧ್ಯಯನವೊಂದರಿಂದ ತಿಳಿದು ಬಂದಿದೆ.

ಆದರೆ ಗಮನಿಸಿ, ಕಡಿಮೆ ಕಾರ್ಬ್ ಆಹಾರ ಕ್ರಮದ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ಇನ್ನೂ ಸಂಶೋಧಿಸಲಾಗುತ್ತಿದೆ. ಈ ಆಹಾರ ಕ್ರಮ ಅನುಸರಿಸಲು ಕಷ್ಟವಾಗಬಹುದು ಮತ್ತು ಇದರಿಂದ ಆರೋಗ್ಯಕರ ತೂಕ ಹೊಂದುವಲ್ಲಿ ಕಡಿಮೆ ಯಶಸ್ಸು ಪಡೆಯಬಹುದು. ಹಾಗಾಗಿ ಈ ಬಗ್ಗೆ ವೈದ್ಯರಿಂದ ಸಲಹೆ ಪಡೆಯುವುದು ಉತ್ತಮ.

ಪ್ರೋಟೀನ್ , ಕೊಬ್ಬು ಮತ್ತು ತರಕಾರಿಗಳನ್ನು ತಿನ್ನಿ

ನಿಮ್ಮ ಊಟದಲ್ಲಿ ಒಂದು ಪ್ರೊಟೀನ್ ಮೂಲ, ಕೊಬ್ಬಿನ ಮೂಲ, ತರಕಾರಿಗಳು, ಧಾನ್ಯಗಳಂತಹ ಸಣ್ಣ ಭಾಗ ಸಂಕೀರ್ಣ ಕಾರ್ಬೋಹೈಡ್ರೆಟ್‍ಗಳು ಇರಲೇಬೇಕು.

ಪ್ರೊಟೀನ್

ತೂಕವನ್ನು ಇಳಿಸುವಾಗ, ನಿಮ್ಮ ಆರೋಗ್ಯ ಮತ್ತು ಸ್ನಾಯುಗಳ ದೃವ್ಯರಾಶಿಯನ್ನು ಕಾಪಾಡಲು ಪ್ರೊಟೀನ್ ತಿನ್ನುವುದು ಅತ್ಯಂತ ಅಗತ್ಯ. ಸೂಕ್ತ ಪ್ರಮಾಣದ ಪ್ರೊಟೀನ್ ತಿನ್ನುವುದರಿಂದ ಕಾರ್ಡಿಯೋ ಮೆಟಬಾಲಿಕ್ ಅಪಾಯದ ಅಂಶಗಳನ್ನು, ಹಸಿವು ಮತ್ತು ದೇಹದ ತೂಕವನ್ನು ಸುಧಾರಿಸಬಹುದು.

  • ಪುರುಷ ದಿನಕ್ಕೆ 56-91 ಗ್ರಾಂನಷ್ಟು ಪ್ರೋಟೀನ್‌ ತಿನ್ನಬೇಕು.
  • ಮಹಿಳೆ ದಿನಕ್ಕೆ 46-75 ಗ್ರಾಂನಷ್ಟು ಪ್ರೋಟೀನ್‌ ತಿನ್ನಬೇಕು.

ಆರೋಗ್ಯಕರ ಪ್ರೋಟೀನ್‌ ಮೂಲಗಳು:

ಮಾಂಸ -ಕೋಳಿ ಮಾಂಸ, ಹಂದಿ ಮಾಂಸ ಮತ್ತು ಮೇಕೆ ಮರಿ ಮಾಂಸ,ಮೀನು ಮತ್ತು ಸಮುದ್ರ ಆಹಾರ -ಸಾಲ್ಮನ್, ಟ್ರೌಟ್ ಮತ್ತು ಶ್ರಿಂಪ್

ಮೊಟ್ಟೆಗಳು:ಸಂಪೂರ್ಣ ಮೊಟ್ಟೆ–ಸಸ್ಯ ಆಧಾರಿತಪ್ರೋಟೀನ್‌ಗಳು:ಬೀನ್ಸ್, ಬೇಳೆಗಳು, ಕಿನೋವಾ ಮತ್ತು ಟೋಫು

ಕಡಿಮೆ ಕಾರ್ಬ್ ಮತ್ತು ಹಸಿರು ಸೊಪ್ಪು ತರಕಾರಿಗಳು

ಹಸಿರು ಸೊಪ್ಪು ತರಕಾರಿಗಳಲ್ಲಿ ಯಥೇಚ್ಛ ಪೋಷಕಾಂಶಗಳು ಇರುತ್ತವೆ. ಬ್ರೊಕೋಲಿ, ಹೂಕೋಸು, ಪಾಲಕ್, ಟೊಮ್ಯಾಟೋ, ಕಾಲೆ, ಬ್ರುಸೆಲ್ಸ್ ಮೊಳಕೆಗಳು, ಎಲೆಕೋಸು, ಲೆಟ್ಟಸ್, ಸೌತೆಕಾಯಿ ಮುಂತಾದವುಗಳನ್ನು ಕಡಿಮೆ ಕಾರ್ಬ್ ಅಥವಾ ಕಡಿಮೆ ಕ್ಯಾಲೋರಿ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು.

ಆರೋಗ್ಯಕರ ಕೊಬ್ಬುಗಳು

ಈ ಕೊಬ್ಬುಗಳನ್ನು ತಿನ್ನುವ ಬಗ್ಗೆ ಭಯ ಬೇಡ. ಯಾವುದೇ ಆಹಾರಕ್ರಮವನ್ನು ಅನುಸರಿಸಿ, ಆದರೆ ದೇಹಕ್ಕೆ ಆರೋಗ್ಯಕ ಕೊಬ್ಬಿನ ಅಗತ್ಯವಂತೂ ಇದ್ದೇ ಇದೆ. ಆಲಿವ್ ಎಣ್ಣೆ ಮತ್ತು ಅವಕಾಡೋ ಎಣ್ಣೆಯ ಬಳಕೆ ಈ ವಿಷಯದಲ್ಲಿ ಒಳ್ಳೆಯ ಆಯ್ಕೆ. ಬೆಣ್ಣೆ ಮತ್ತು ತೆಂಗಿನ ಎಣ್ಣೆಯಲ್ಲಿ ಅಧಿಕ ಸ್ಯಾಚುರೇಟೆಡ್ ಕೊಬ್ಬು ಇರುವುದರಿಂದ ಒಂದು ಸೂಕ್ತ ಪ್ರಮಾಣದಲ್ಲಿ ಅವುಗಳನ್ನು ಸೇವಿಸುವುದು ಒಳ್ಳೆಯದು.

Related Post

Leave a Comment