ಅತಿಥಿಗೆ ತಣ್ಣನೆ ನೀರು ನೀಡಿದರೆ ದೂರವಾಗುತ್ತೆ ಈ ಎಲ್ಲಾ ದೋಷ!

ದೇವರ ಪೂಜೆ ಜೊತೆ ಕೆಲವೊಂದು ನಂಬಿಕೆಗಳು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ಮೂಲಕ ಕೂಡ ಭಗವಂತನನ್ನು ಪ್ರಸನ್ನಗೊಳಿಸಬಹುದು. ಮನೆಗೆ ಅತಿಥಿ ಬಂದಾಗ ಅವರಿಗೆ ಅವಶ್ಯವಾಗಿ ತಣ್ಣನೇ ನೀರನ್ನು ನೀಡಬೇಕು. ಇದರಿಂದ ರಾಹು ಗ್ರಹದ ದೋಷ ದೂರವಾಗುತ್ತದೆ. ಜಾತಕದಲ್ಲಿ ಕಾಳಸರ್ಪ ದೋಷವಿದ್ದವರು ಇದರ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು. ದೇವರ ಮನೆ ಸ್ವಚ್ಛವಾಗಿರಬೇಕು. ದೇವರ ಮನೆಯ ವಸ್ತುಗಳನ್ನು ಸುಂದರವಾಗಿ ವಾಸ್ತು ಪ್ರಕಾರ ಜೋಡಿಸಿ ಇಡಬೇಕು.

ದೇವರ ಮನೆ ಸ್ವಚ್ಛವಾಗಿ ಇದ್ದರೆ ಮನೆಯಲ್ಲಿ ದೇವರು ನೆಲೆಸಿರುತ್ತಾನೆ. ಇದರಿಂದ ಜಾತಕ ದೋಷ ಕೂಡ ಕಡಿಮೆ ಆಗುತ್ತದೆ. ಕೆಲವೊಂದು ಅಡುಗೆ ಮನೆ ಸ್ವಚ್ಛವಾಗಿ ಇರುವುದಿಲ್ಲ. ಅಂತವರು ಮಂಗಳನಾ ದೋಷಕ್ಕೆ ಒಳಗಾಗುತ್ತಾರೆ. ಮಂಗಳ ದೋಷ ಕಾಡಿದರೆ ಮದುವೆ ವಿಳಂಬ ಆಗುತ್ತದೆ. ಭೂಮಿಗೆ ಸಂಬಂಧಿಸಿದ ಸಮಸ್ಸೆ ಕಾಡುತ್ತದೆ.ಹಾಗಾಗಿ ಅಡುಗೆ ಮನೆಯನ್ನು ಸದಾ ಸ್ವಚ್ಛವಾಗಿ ಇಡಬೇಕು.

ಬುಧ ಸೂರ್ಯ ಶುಕ್ರ ಮತ್ತು ಚಂದ್ರನ ದೋಷವುಳ್ಳವರು ಗಿಡ ಮರಗಳ ಅರೈಕೆ ಮಾಡಬೇಕು. ಸಸ್ಯಗಳ ಅರೈಕೆಯಿಂದ ಮಾನಸಿಕ ಒತ್ತಡ ಕೂಡ ಕಡಿಮೆ ಆಗುತ್ತದೆ. ಮನೆಯ ಹಿರಿಯರಿಗೆ ಅವಮಾನ ಮಾಡಿದಲ್ಲಿ ಮನೆಯ ಶಾಂತಿ ಹಾಳಾಗುತ್ತದೆ. ಭಾಗ್ಯ ಎಂದು ಕೈ ಹಿಡಿಯುವುದಿಲ್ಲ. ಹಾಗಾಗಿ ಮನೆಯಲ್ಲಿ ಇರುವ ಹಾಗು ಸಮಾಜದಲ್ಲಿ ಇರುವ ಎಲ್ಲಾ ಹಿರಿಯರನ್ನು ಗೌರವಿಸಬೇಕು.

Related Post

Leave a Comment