ವಿಪರೀತ ಬೆವರಿದರೆ ಈ ರೋಗಗಳು ಇರುತ್ತವೆ!

ಇದ್ದಕ್ಕಿದ್ದಂತೆ ಅಥವಾ ಏಕಾಏಕಿ ಬೆವರುವಿವುದು ಗಂಭೀರ ಮತ್ತು ಮಾರಣಾಂತಿಕ ಕಾಯಿಲೆಯ ಸಂಕೇತ ಆಗಿದೆ. ಹಾಗಾಗಿ ಹಠಾತ್ ಬೆವರುವಿಕೆಯನ್ನು ನಿರ್ಲಕ್ಷ್ಯ ಮಾಡಬಾರದು ಎಂದು ತಜ್ಞರು ತಿಳಿಸುತ್ತಾರೆ. ಹಠಾತ್ ಬೆವರುವುದು ಯಾವುದೋ ಕೆಟ್ಟ ಹಾಗೂ ಅಪಾಯಕಾರಿ ರೋಗದ ಚಿಹ್ನೆಯಾಗಿರುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದ್ದಕ್ಕಿದ್ದಂತೆ ಅಥವಾ ಏಕಾಏಕಿ ಬೆವರುವುದು ಆರೋಗ್ಯಕ್ಕೆ ಅಪಾಯಕಾರಿ. ಹಠಾತ್ ಬೆವರುವುದು ಯಾವತ್ತೂ ನಿರ್ಲಕ್ಷಿಸಬೇಡಿ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಅತಿಯಾದ ಬಿಸಿಲಿನ ಶಾಖ ಅಥವಾ ಶ್ರಮದಾಯಕ ಕೆಲಸ ಮಾಡಿದಾಗ ಜನರು ಸಾಕಷ್ಟು ಬೆವರು ಹರಿಸುವುದು ಸಾಮಾನ್ಯ. ಆದರೆ ಕೆಲವರು ಪ್ರತಿ ಋತುವಿನಲ್ಲಿ ಬೆವರುತ್ತಲೇ ಇರುತ್ತಾರೆ. ಆದರೆ ಕೆಲವರು ತುಂಬಾ ಬಿಸಿಯಾದ ವಾತಾವರಣ, ದೇಹದ ಉಷ್ಣತೆಯ ಪರಿಣಾಮ ಹಾಗೂ ದಪ್ಪ ಇರುವವರು ಹೆಚ್ಚು ಬೆವರುತ್ತಾರೆ. ಆದರೆ ಯಾರಾದರೂ ಇದ್ದಕ್ಕಿದ್ದಂತೆ, ಏಕಾಏಕಿ ಬೆವರಿದರೆ ನಿರ್ಲಕ್ಷ್ಯ ಮಾಡದೇ ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕ ಮಾಡಬೇಕು.

ಹಠಾತ್ ಬೆವರುವುದು ಅಪಾಯಕಾರಿ ಎನ್ನುತ್ತಾರೆ ತಜ್ಞರು. Themirror ನ ವರದಿಯ ಪ್ರಕಾರ, ಅತಿಯಾದ ಮತ್ತು ಹಠಾತ್ ಬೆವರುವುದು ಸಹ ಹೃದಯಾಘಾತದ ಸಂಕೇತವಾಗಿದೆ. ಯಾರಲ್ಲಿ ಕಸರತ್ತು ಮಾಡದೇ, ಬಿಸಿಲಿನ ಶಾಖ ಅನುಭವಿಸದೇ ಇದ್ದಾಗ ಹೆಚ್ಚು ಬೆವರುತ್ತಾರೋ ಅಂತವರು ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು.

ವಾಸ್ತವವಾಗಿ, ಯಾರಿಗಾದರೂ ಹೃದಯಾಘಾತವಾದಾಗ, ಆ ಸಮಯದಲ್ಲಿ ಪರಿಧಮನಿಯ ಅಪಧಮನಿಗಳು ಹೃದಯಕ್ಕೆ ಸರಿಯಾಗಿ ರಕ್ತವನ್ನು ಪಂಪ್ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಹೃದಯಾಘಾತದ ಸಮಯದಲ್ಲಿ, ಹೃದಯಕ್ಕೆ ಹೆಚ್ಚಿನ ರಕ್ತದ ಅಗತ್ಯವಿರುತ್ತದೆ. ಮತ್ತು ನಂತರ ರಕ್ತವನ್ನು ಸಾಗಿಸಲು ಅಪಧಮನಿಗಳು ಹೆಚ್ಚು ಶ್ರಮಿಸಬೇಕಾಗುತ್ತದೆ.

ಅಂತಹ ಸ್ಥಿತಿಯಲ್ಲಿ ಹೆಚ್ಚು ಬೆವರುವುದು ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡುತ್ತದೆ. ಹೃದಯಾಘಾತವು ಬಹಳ ಗಂಭೀರ ವೈದ್ಯಕೀಯ ಸ್ಥಿತಿ. ಇದರಲ್ಲಿ ವ್ಯಕ್ತಿಗೆ ಚೇತರಿಸಿಕೊಳ್ಳುವ ಅವಕಾಶವೇ ಸಿಗಲ್ಲ. ಹಾಗಾಗಿ ಅವನು ಪ್ರಾಣ ಕಳೆದುಕೊಳ್ಳ ಬೇಕಾಗುತ್ತದೆ. ಪರಿಧಮನಿಯ ಅಪಧಮನಿಗಳು ಹೃದಯಕ್ಕೆ ರಕ್ತವನ್ನು ಸಾಗಿಸುತ್ತವೆ.

ಮತ್ತು ಶಕ್ತಿ ಮತ್ತು ಆಮ್ಲಜನಕದ ಮೂಲಕ ಅದನ್ನು ಜೀವಂತವಾಗಿರಿಸಿಕೊಳ್ಳುತ್ತವೆ. ಪರಿಧಮನಿಯ ಕಾಯಿಲೆ ಇದ್ದಾಗ ರಕ್ತವು ಹೃದಯ ಸ್ನಾಯುವಿಗೆ ಸರಿಯಾಗಿ ತಲುಪುವುದಿಲ್ಲ ಮತ್ತು ಇದರಿಂದಾಗಿ ಹೃದಯಾಘಾತ ಉಂಟಾಗುತ್ತದೆ. ಹೃದಯಾಘಾತವು ಹೃದಯ ಬಡಿತ ನಿಲ್ಲಿಸಲು ಕಾರಣವಾಗಬಹುದು. ಇದನ್ನು ಹೃದಯ ಸ್ತಂಭನ ಎನ್ನತ್ತಾರೆ.

ರಾತ್ರಿ ಬೆವರುವುದು

ಮಹಿಳೆಯರು ರಾತ್ರಿ ಹೆಚ್ಚು ಬೆವರಿದರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು. ರಾತ್ರಿಯಲ್ಲಿ ಬೆವರುವುದು, ಬೇಸಿಗೆಯಲ್ಲಿ ಬೆವರುವುದು, ಋತುಬಂಧದ ಸಮಯದಲ್ಲಿ ಸಾಮಾನ್ಯ. ಆದರೆ ಅತಿಯಾದ ಬೆವರುವುದು ಎಚ್ಚರಿಕೆಯ ಕರೆಗಂಟೆಯಾಗಿದೆ.

ಸೆಕೆಂಡರಿ ಹೈಪರ್ಹೈಡ್ರೋಸಿಸ್

Drugs.com ಪ್ರಕಾರ, ಬೆವರುವಿಕೆ ಅಪಧಮನಿಕಾಠಿಣ್ಯದೊಂದಿಗೆ ಸಂಬಂಧ ಹೊಂದಿರಬಹುದು. ಪ್ಲೇಕ್ ಎಂಬ ಕೊಬ್ಬಿನ ಶೇಖರಣೆಯಿಂದ ಅಪಧಮನಿಗಳು ಕಿರಿದಾಗುವ ಸ್ಥಿತಿಯೇ ಅಪಧಮನಿಕಾಠಿಣ್ಯ ಆಗಿದೆ. ಅಪಧಮನಿಕಾಠಿಣ್ಯವು ಹೃದಯಾಘಾತಕ್ಕೆ ಕಾರಣವಾಗಿದೆ. ಅತಿಯಾದ ಬೆವರುವಿಕೆ ಗಂಭೀರ ಸ್ಥಿತಿಯ ಕಾರಣದಿಂದಾಗಿ ಹೃದಯಾಘಾತ ಸಂಭವಿಸಿದಾಗ, ಅದನ್ನು ಸೆಕೆಂಡರಿ ಹೈಪರ್ಹೈಡ್ರೋಸಿಸ್ ಎಂದು ಕರೆಯುತ್ತಾರೆ.

ಹೃದಯಾಘಾತದ ಇತರೆ ಸಂಕೇತಗಳು

  • ಎದೆನೋವು
  • ಕೈಗಳಲ್ಲಿ ನೋವು
  • ಕುತ್ತಿಗೆ, ದವಡೆ ಅಥವಾ ಬೆನ್ನಿನ ಮೇಲೆ ಒತ್ತಡ
  • ಉಸಿರಾಟದ ತೊಂದರೆ
  • ತಲೆತಿರುಗುವಿಕೆ
  • ವಾಕರಿಕೆ ಅಥವಾ ಅಜೀರ್ಣ
  • ಆಯಾಸ
  • ಬುದ್ಧಿಮಾಂದ್ಯತೆ

ಬುದ್ಧಿಮಾಂದ್ಯತೆ ಅಪಾಯ

ಅಧ್ಯಯನದ ಪ್ರಕಾರ, ಹೃದಯಾಘಾತದ ಅಪಾಯವನ್ನು ಹೆಚ್ಚಿಸುವ ಮಧ್ಯದ ಪರಿಸ್ಥಿತಿಗಳು ಸಹ ಬುದ್ಧಿಮಾಂದ್ಯತೆಯ ಅಪಾಯ ಹೆಚ್ಚಿಸಬಹುದು .ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ದಿ ಯೂನಿವರ್ಸಿಟಿ ಆಫ್ ಎಕ್ಸೆಟರ್‌ನ ತಜ್ಞರು ನಡೆಸಿದ ಅಧ್ಯಯನದ ಪ್ರಕಾರ, ಇದು ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಬುದ್ಧಿಮಾಂದ್ಯತೆಯ ನಡುವಿನ ಅತಿದೊಡ್ಡ ಅಧ್ಯಯನವಾಗಿದೆ.

ಈ ಅಧ್ಯಯನವನ್ನು ದಿ ಲ್ಯಾನ್ಸೆಟ್ ಹೆಲ್ತಿ ಲಾಂಗ್ವಿಟಿ ಪೇಪರ್‌ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನವು UK ಬಯೋಬ್ಯಾಂಕ್‌ನಲ್ಲಿ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 200,000 ಕ್ಕಿಂತ ಹೆಚ್ಚು ಜನರನ್ನು ಒಳಗೊಂಡಿತ್ತು. ಪಾರ್ಶ್ವವಾಯು ಅಥವಾ ಹೃದಯಾಘಾತದಂತಹ ಪರಿಸ್ಥಿತಿಗಳಿರುವ ಜನರಲ್ಲಿ ಬುದ್ಧಿಮಾಂದ್ಯತೆಯ ಅಪಾಯವು ಮೂರು ಪಟ್ಟು ಹೆಚ್ಚು ಎಂದಿದೆ ಅಧ್ಯಯನ.

Related Post

Leave a Comment