ಪಡವಲಕಾಯಿ ಸಕ್ಕರೆ ಕಾಯಿಲೆಗೆ ಅದ್ಭುತವಾದ ಔಷಧಿ!

ಆಹಾರ ಪದ್ಧತಿಯ ವಿಷ್ಯಕ್ಕೆ ಬರುವುದಾದರೆ, ಎಷ್ಟು ಎಚ್ಚರಿಕೆ ವಹಿಸುತ್ತಾರೋ ಅಷ್ಟು ಒಳ್ಳೆಯದು. ಮುಖ್ಯವಾಗಿ ಸಕ್ಕರೆ ಅಂಶ ಕಡಿಮೆ ಇರುವ ಆಹಾರಗಳ ಜೊತೆಗೆ ನೀರಿನಾಂಶ ಹೆಚ್ಚಿರುವ ಆಹಾರಗಳನ್ನ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು. ವೈದ್ಯರು ಕೂಡ ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳನ್ನು, ಹಣ್ಣುಗಳನ್ನು ಮಧುಮೇಹ ಇರುವವರು ಹೆಚ್ಚಾಗಿ ಸೇವನೆ ಮಾಡಬೇಕು ಎಂದು ಹೇಳುತ್ತಾರೆ.

ಸಾಕಷ್ಟು ಜನರಿಗೆ ಈ ಪಡವಲಕಾಯಿ ಎಂದರೆ ಏನು ಎಂತಲೇ ಗೊತ್ತಿರುವುದಿಲ್ಲ. ಹಾವಿನಂತೆ ಕಾಣುವ ಈ ತರಕಾರಿಯನ್ನು ನೋಡಿ ಮೂಗು ಮುರಿಯುವವರೇ ಹೆಚ್ಚು. ಆದರೆ ನಿಮಗೆ ಗೊತ್ತಾ ಈ ತರಕಾರಿಯಲ್ಲಿ ನಿಮಗೆ ಊಹೆ ಮಾಡಲು ಕಷ್ಟವಾಗುವಷ್ಟು ಆರೋಗ್ಯ ಪ್ರಯೋಜನಗಳಿವೆ.ಹಾಗಾದರೆ ಪಡವಲಕಾಯಿ ದೇಹಕ್ಕೆ ಯಾವೆಲ್ಲಾ ಪ್ರಯೋಜನಗಳನ್ನು ನೀಡಲಿದೆ ಎನ್ನುವ ಮಾಹಿತಿ ಈ ಲೇಖನದಲ್ಲಿದೆ ನೋಡಿ, ತಿಳಿದುಕೊಳ್ಳಿ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ–ಪಡವಲ ಕಾಯಿಯಲ್ಲಿನ ಸಾರಗಳು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತವೆ. ರಕ್ತದೊತ್ತಡವನ್ನು ಸಮತೋಲನದಲ್ಲಿಟ್ಟು ಹೃದಯಕ್ಕೆ ಸಂಬಂಧಿಸಿದ ಒತ್ತಡ ಮತ್ತು ನೋವನ್ನು ಕಡಿಮೆ ಮಾಡಲು ಇದು ಅತ್ಯುತ್ತಮ ಆಹಾರವಾಗಿದೆ.ನೀವು ಪ್ರತಿದಿನ ಈ ಪಡವಲಕಾಯಿಯ ಜ್ಯೂಸ್‌ ಮಾಡಿ ಸೇವನೆ ಮಾಡಬಹುದು. ಅಥವಾ ಸಲಾಡ್‌, ಸಾಂಬಾರ್‌ ಮೂಲಕ ಕೂಡ ಸೇವನೆ ಮಾಡಬಹುದು.

​​ಮಲಬದ್ಧತೆಯನ್ನು ನಿವಾರಿಸುತ್ತದೆ–ಪಡವಲಕಾಯಿ ಮಲಬದ್ಧತೆಗೆ ಉತ್ತಮ ಚಿಕಿತ್ಸೆ ನೀಡುತ್ತದೆ. ಗ್ಯಾಸ್ಟ್ರಿಕ್‌ ಅಥವಾ ಆಸಿಡಿಟಿಯಿಂದ ಹೊಟ್ಟೆ ಭಾರವಾಗಿದ್ದರೆ ಅದನ್ನು ನಿವಾರಿಸಿ, ಹೊಟ್ಟೆಯುಬ್ಬರ, ನೋವನ್ನು ಕಡಿಮೆ ಮಾಡುತ್ತದೆ.ಅಲ್ಲದೆ ಆಹಾರ ಜೀರ್ಣವಾಗದೆ ಮಲಬದ್ಧತೆ ಸಮಸ್ಯೆಯಾಗಿದ್ದರೆ ನಿಮ್ಮ ಕರುಳಿನ ಚಲನೆಯನ್ನು ಸುಧಾರಿಸಿ ಮಲವಿಸರ್ಜನೆಯನ್ನು ಸುಲಭಗೊಳಿಸುತ್ತದೆ. ನೀವು ಪ್ರತಿದಿನ ಬೆಳಿಗ್ಗೆ 1 ರಿಂದ 2 ಚಮಚ ಪಡವಲಕಾಯಿ ರಸವನ್ನು ಸೇವನೆ ಮಾಡಿದರೆ ಹೊಟ್ಟೆ ಸಮಸ್ಯೆ ನಿವಾರಣೆಯಾಗಿ ದೇಹಕ್ಕೆ ಆರಾಮದಾಯಕ ಅನುಭವ ಸಿಗುತ್ತದೆ.

​ಟೈಪ್‌ 2 ಮಧುಮೇಹಕ್ಕೆ ಒಳ್ಳೆಯದು–ಸಾಮಾನ್ಯವಾಗಿ ಮಧುಮೇಹ ಇದ್ದವರಿಗೆ ಅದನ್ನು ಸೇವಿಸಬಾರದು, ಇದನ್ನು ಸೇವಿಸಬಾರದು ಎನ್ನುತ್ತಾರೆ. ಆದರೆ ಪಡವಲಕಾಯಿ ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ. ಟೈಪ್ 2 ಡಯಾಬಿಟಿಸ್ ಇರುವವರಿಗೆ ಈ ತರಕಾರಿ ಉತ್ತಮವಾಗಿದೆ. ಸೋರೆಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸಿ ಮಧುಮೇಹವನ್ನು ನಿಯಂತ್ರಿಸಲು ಪಡವಲಕಾಯಿ ಸಹಕಾರಿಯಾಗಿದೆ.

​ಕಾಮಾಲೆಗೆ ಪಥ್ಯದ ಆಹಾರವಾಗಿದೆ–ಕಣ್ಣು, ಉಗುರುಗಳೆಲ್ಲ ಹಳದಿಯಾಗುವ ಜಾಂಡೀಸ್‌ ಅಥವಾ ಕಾಮಾಲೆಗೆ ಪಡವಲಕಾಯಿ ಉತ್ತಮ ಆಹಾರವಾಗಿದೆ. ಅಲ್ಲದೆ ಕಾಮಾಲೆಯಾದಾಗ ಪಥ್ಯ ಮಾಡುವ ಅಗತ್ಯವಿರುತ್ತದೆ. ಹೀಗಾಗಿ ಕಾಮಾಲೆ ಚಿಕಿತ್ಸೆಗಾಗಿ ಪಡುವಲಕಾಯಿಯ ಎಲೆಗಳನ್ನು ಕೊತ್ತಂಬರಿ ಸೊಪ್ಪಿನೊಂದಿಗೆ ಸೇವಿಸಿ. ನೀವು ದಿನಕ್ಕೆ ಮೂರು ಬಾರಿ ಈ ಮನೆಮದ್ದನ್ನು ವೈದ್ಯರ ಸಲಹೆಯೊಂದಿಗೆ ಸೇವನೆ ಮಾಡಿದರೆ ಕಾಮಾಲೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

​ತೂಕ ನಷ್ಟಕ್ಕೆ ಸಹಕಾರಿ–ಪಡವಲಕಾಯಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ ಮತ್ತು ಕೊಬ್ಬಿನ ಅಂಶವನ್ನು ಹೊಂದಿರುವುದಿಲ್ಲ. ಹೀಗಾಗಿ ಇದು ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.ಏಕೆಂದರೆ ಇದು ನೀರು ಮತ್ತು ನಾರಿನ ಜೊತೆಗೆ ಪ್ರಮುಖ ಪೋಷಕಾಂಶಗಳನ್ನು ಹೊಂದಿರುತ್ತದೆ. ಆದ್ದರಿಂದ ನೀವು ನೈಸರ್ಗಿಕವಾಗಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಪಡವಲಕಾಯಿಯ ಜ್ಯೂಸ್‌ ಸಹಾಯಕವಾಗಿದೆ.

Related Post

Leave a Comment