ಲಿವರ್ ಅರೋಗ್ಯವಾಗಿ ಇರಬೇಕಾ ಇದೊಂದು ಲೋಟ ಸಾಕು!

ಲಿವರ್ ಅನ್ನೋದು ದೇಹದಲ್ಲಿ ಒಂದು ಪ್ರಮುಖ ಅಂಗವಾಗಿದೆ. ಇತ್ತೀಚಿನ ಜೀವನಶೈಲಿ ಮತ್ತು ಕಳಪೆ ಆಹಾರ ಪದ್ಧತಿಯಿಂದ ಲಿವರ್‌ಗೆ ಹಾನಿ ಸಂಭವಿಸುತ್ತದೆ. ಲಿವರ್‌ ಎಷ್ಟು ಆರೋಗ್ಯಕರವಾಗಿರುತ್ತದೆಯೋ ದೇಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದರ್ಥ. ಹೆಚ್ಚು ತೂಕ ವಿವಿಧ ಕಾಯಿಲೆಗಳು ಮತ್ತು ಯಕೃತ್ತಿನ (ಲಿವರ್‌) ಹಾನಿಗೆ ಕಾರಣವಾಗುತ್ತದೆ. ಇದು ದೇಹಕ್ಕೆ ಬೇಕಾಗುವ ಪ್ರೋಟೀನ್‌ಗಳನ್ನು ತಯಾರಿಸುತ್ತದೆ. ಕಾರ್ಬೋಹೈಡ್ರೇಟ್‌ಗಳನ್ನು ಸಂಗ್ರಹಿಸುವುದು ಮತ್ತು ದೇಹದಿಂದ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುವಂತಹ ಅನೇಕ ಪ್ರಮುಖ ಕಾರ್ಯಗಳನ್ನು ಲಿವರ್‌ ನಿರ್ವಹಿಸುತ್ತದೆ. 

ಪಿತ್ತಜನಕಾಂಗದ ಕಾಯಿಲೆಗಳಲ್ಲಿ ಪ್ರಮುಖವಾದದ್ದು ʼಫ್ಯಾಟ್‌ ಲಿವರ್ʼ. ಇದು ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಇದರಲ್ಲಿ ಎರಡು ವಿಧಗಳಿವೆ. ಆಲ್ಕೊಹಾಲ್‌ಯುಕ್ತ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ, ಇದು ಆಲ್ಕೊಹಾಲ್ ಸೇವನೆಯಿಂದ ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯಿಂದ ಉಂಟಾಗುತ್ತದೆ. ಆದರೆ ಕುಡಿಯದವರಲ್ಲಿ ಫ್ಯಾಟ್‌ ಲಿವರ್ ಸಮಸ್ಯೆಗಳೂ ಸಹ ಕಾಣಿಸಿಕೊಳ್ಳುತ್ತವೆ. ಇದನ್ನು ನಾನ್-ಆಲ್ಕೊಹಾಲಿಕ್ ಫ್ಯಾಟಿ ಲಿವರ್ ಕಾಯಿಲೆ ಎಂದು ಕರೆಯಲಾಗುತ್ತದೆ. ಆಲ್ಕೊಹಾಲ್‌ನಿಂದ ಬಾರದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯು ಜೀವನಶೈಲಿ ಮತ್ತು ಕಳಪೆ ಆಹಾರದಿಂದ ಉಂಟಾಗುತ್ತದೆ. ಲಿವರ್ ಅರೋಗ್ಯವಾಗಿ ಇರಲು ಈ ಒಂದು ಮನೆಮದ್ದು ಮಾಡಿ ಕುಡಿಯಿರಿ.

ಮೊದಲು ಎರಡು ನೆಲ್ಲಿಕಾಯಿ ಕಟ್ ಮಾಡಿ ಮತ್ತು 2 ಚಮಚ ಅಲೋವೆರಾ ಜೆಲ್, ಕೊತ್ತಂಬರಿ ಸೊಪ್ಪು, 1 ಚಮಚ ಜೀರಿಗೆ,1 ಪಿಂಚ್ ಅರಿಶಿನ ಮತ್ತು ಒಂದು ಲೋಟ ನೀರನ್ನು ಮಿಕ್ಸಿ ಜಾರಿಗೆ ಹಾಕಿ ಜ್ಯೂಸ್ ಮಾಡಬೇಕು.ಇದರಲ್ಲಿ ಬಳಸಿರುವ ಪ್ರತಿಯೊಂದು ಪದಾರ್ಥ ಕೂಡ ಲಿವರ್ ಅರೋಗ್ಯಕ್ಕೆ ತುಂಬಾ ಒಳ್ಳೆಯದು. ನಂತರ ಇದಕ್ಕೆ ನಾಲ್ಕು ಕಾಳು ಕಲ್ಲು ಉಪ್ಪು ಹಾಕಿ ಶೋದಿಸಿ ಕುಡಿಯಬೇಕು. ಆದಷ್ಟು ಇದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

Related Post

Leave a Comment