ಸಕ್ಕರೆ ಕಾಯಿಲೆ ಮತ್ತು ಕಿಡ್ನಿ ಸಮಸ್ಸೆಗೆ ಶಾಶ್ವತ ಪರಿಹಾರ!

ನಮ್ಮ ದೇಹದಲ್ಲಿ ಕಿಡ್ನಿಗಳು ಅಥವಾ ಮೂತ್ರಪಿಂಡಗಳು ಇನ್ನಿತರ ಪ್ರಮುಖ ಅಂಗಾಂಗಗಳ ಸಾಲಿಗೆ ಸೇರುತ್ತವೆ. ಇವು ಗಳು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ಹೊರ ಹಾಕುವ ಕೆಲಸವನ್ನು ಮಾಡುವಲ್ಲಿ ನಿರತವಾ ಗಿರುತ್ತವೆ.

ಆದರೆ ಒಂದು ವೇಳೆ ಕಿಡ್ನಿಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡದೇ ಹೋದರೆ ವಿಷಕಾರಿ ಅಂಶಗಳ ಅಥವಾ ತ್ಯಾಜ್ಯಗಳ ಪ್ರಮಾಣ ನಮ್ಮ ದೇಹದಲ್ಲಿ ಅತಿ ಹೆಚ್ಚಾಗಿ ಹೋಗುತ್ತದೆ.ಹೀಗಾಗಿ ಕಿಡ್ನಿಗಳ ಆರೋಗ್ಯದ ಸಲುವಾಗಿ ಅವುಗಳ ಆರೈಕೆ ಬಹಳ ಮುಖ್ಯವಾಗುತ್ತದೆ. ನಿಮ್ಮ ಆಹಾರ ಪದ್ಧತಿ ಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಆರೋಗ್ಯಕರ ಕಿಡ್ನಿಗಳ ಕಾರ್ಯವಿಧಾನವನ್ನು ನಿಮ್ಮದಾಗಿಸಿಕೊಳ್ಳ ಬಹುದು. ತಜ್ಞರು ಹೇಳುವ ಪ್ರಕಾರ ನುಗ್ಗೆಕಾಯಿ ನಿಮಗೆ ಈ ನಿಟ್ಟಿನಲ್ಲಿ ಸಹಾಯ ಮಾಡುತ್ತದೆ.ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿರ್ವಹಿಸುತ್ತೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಜನರಲ್ಲಿ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗಿರುತ್ತದೆ.ಇದು ಕಿಡ್ನಿಗಳಲ್ಲಿ ಇರುವಂತಹ ಸಣ್ಣ ರಕ್ತನಾಳಗಳನ್ನು ಹಾನಿ ಮಾಡುತ್ತದೆ. ಆದರೆ ಆಗಾಗ ನುಗ್ಗೆಕಾಯಿ ತಿನ್ನುವುದ ರಿಂದ ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಆಗುತ್ತದೆ. ಇದು ಕಿಡ್ನಿಗಳಿಗೆ ತುಂಬಾ ಪ್ರಯೋಜನಕಾರಿ.

ವಿಷಕಾರಿ ಅಂಶಗಳನ್ನು ತೆಗೆದು ಹಾಕುತ್ತದೆ

ನಾವು ಮೊದಲೇ ಹೇಳಿದ ಹಾಗೆ ನಮ್ಮ ದೇಹದಲ್ಲಿ ವಿಷಕಾರಿ ಅಂಶಗಳನ್ನು ತೆಗೆದು ಹಾಕುವ ಕೆಲಸವನ್ನು ಕಿಡ್ನಿಗಳು ಮಾಡುತ್ತವೆ.ಆದರೆ ನುಗ್ಗೆಕಾಯಿ ತಿನ್ನುವುದರಿಂದ ರಕ್ತದಲ್ಲಿನ ವಿಷಕಾರಿ ತ್ಯಾಜ್ಯಗಳ ಪ್ರಮಾಣವನ್ನು ತೆಗೆದು ಹಾಕುವುದರ ಜೊತೆಗೆ ನಮ್ಮ ದೇಹಕ್ಕೆ ಆಂಟಿ ಬಯೋಟಿಕ್ ಲಕ್ಷಣಗಳು ಸಿಗುತ್ತವೆ.ಬೇಕೆಂದರೆ ನುಗ್ಗೆಕಾಯಿ ಜ್ಯೂಸ್ ಮಾಡಿ ಕುಡಿಯುವುದು ಕೂಡ ತುಂಬಾ ಒಳ್ಳೆಯದು. ಇದು ರಕ್ತವನ್ನು ಶುದ್ಧೀಕ ರಣ ಮಾಡುತ್ತದೆ ಮತ್ತು ರಕ್ತನಾಳಗಳಲ್ಲಿ ಸರಾಗವಾದ ರಕ್ತ ಸಂಚಾರ ಉಂಟಾಗುವಂತೆ ಮಾಡುವುದರಿಂದ ದೇಹದ ಇತರ ಅಂಗಾಂಗಗಳು ಅಚ್ಚುಕಟ್ಟಾಗಿ ಕೆಲಸ ಮಾಡುತ್ತವೆ.​

ಬಲವಾದ ಮೂಳೆಗಳು ರೂಪುಗೊಳ್ಳುತ್ತವೆ

​ಮೂಳೆಗಳ ಸಮಸ್ಯೆ ಇರುವವರಿಗೆ ಕಿಡ್ನಿ ತೊಂದರೆ ಬೇಗನೆ ಬರುತ್ತದೆ ಎಂದು ಹೇಳುತ್ತಾರೆ. ಏಕೆಂದರೆ ಮೂಳೆಗಳ ದುರ್ಬಲತೆ ಕಿಡ್ನಿಗಳಲ್ಲಿನ ರಕ್ತನಾಳಗಳ ಭಾಗದಲ್ಲಿ ಹರಿಯುವ ರಕ್ತ ವಿಷಕಾರಿ ತ್ಯಾಜ್ಯಗಳ ಜೊತೆ ಮಿಕ್ಸ್ ಆಗುವಂತೆ ಮಾಡುತ್ತದೆ.ಇದರಿಂದ ಕಿಡ್ನಿಗಳಿಗೆ ಸಂಪರ್ಕಿಸುವ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಶೇಖರಣೆ ಆಗುತ್ತದೆ.ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳು ಮತ್ತು ಇನ್ನಿತರ ವಿಟಮಿನ್ ಅಂಶಗಳು ನುಗ್ಗೆಕಾಯಿಯಲ್ಲಿ ಹೇರಳವಾಗಿ ಕಂಡುಬರುವುದರಿಂದ ಮೂಳೆ ದೌರ್ಬಲ್ಯ ದೂರವಾಗುತ್ತದೆ.ಅದರಲ್ಲೂ ನಿಯಮಿತವಾಗಿ ಆಗಾಗ ನುಗ್ಗೆಕಾಯಿ ತಿನ್ನುತ್ತಿದ್ದರೆ ಮೂಳೆಗಳ ಆರೋಗ್ಯ ಅಭಿವೃದ್ಧಿ ಯಾಗುತ್ತದೆ.

ದೇಹದ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳ್ಳುತ್ತದೆ

ನಿಮ್ಮ ದೇಹದಲ್ಲಿ ಜೀರ್ಣಶಕ್ತಿ ಹೆಚ್ಚಾದಂತೆ ನೀವು ಸೇವಿಸುವ ಆಹಾರದಲ್ಲಿ ಸಿಗುವ ಬಹುತೇಕ ಪೌಷ್ಟಿಕ ಅಂಶಗಳು ನಿಮ್ಮ ದೇಹ ತಲುಪುತ್ತವೆ.ಹೀಗಾಗಿ ಕಿಡ್ನಿಗಳ ಆರೋಗ್ಯ ಕಾಪಾಡಲು ದೇಹದ ಜೀರ್ಣಶಕ್ತಿ ಅಭಿವೃದ್ಧಿ ಪಡಿಸಲು ಕಾರಣವಾಗುವ ನುಗ್ಗೆಕಾಯಿಯನ್ನು ಆಗಾಗ ಸೇವಿಸುವುದು ಒಳ್ಳೆಯದು. ನುಗ್ಗೆ ಸೊಪ್ಪು ಕೂಡ ಒಳ್ಳೆಯದು ಎಂದು ತಿಳಿದವರು ಹೇಳುತ್ತಾರೆ.

ಈ ತರಕಾರಿಯಲ್ಲಿ ಸಿಗುವ ಪೌಷ್ಟಿಕ ಸತ್ವಗಳು

ವಿಟಮಿನ್ ಬಿ ಕಾಂಪ್ಲೆಕ್ಸ್, ಫೋಲಿಕ್ ಆಮ್ಲ, ನಯಸಿನ್ ಇನ್ನಿತರ ಸಾಕಷ್ಟು ಪ್ರಮಾಣದ ಅಂಶಗಳು ನಮ್ಮ ದೇಹದ ಜೀರ್ಣಶಕ್ತಿ ಹೆಚ್ಚಿಸುವಲ್ಲಿ ಕೆಲಸ ಮಾಡುತ್ತವೆ.ಸಂಕೀರ್ಣ ಕಾರ್ಬೋಹೈಡ್ರೇಟ್, ಪ್ರೋಟೀನ್ ಹಾಗೂ ಕೊಬ್ಬಿನ ಅಂಶಗಳನ್ನು ಸುಲಭ ರೂಪಕ್ಕೆ ತರುವ ಕೆಲಸವನ್ನು ಇವುಗಳು ಮಾಡುತ್ತವೆ. ಇದರಿಂದ ನಮ್ಮ ದೇಹದಲ್ಲಿ ಜೀರ್ಣಶಕ್ತಿ ಸರಾಗವಾಗಿ ನಡೆಯುತ್ತದೆ.​ಕೆಲವರಿಗೆ ಮೂತ್ರ ವಿಸರ್ಜನೆಯ ಸಂದರ್ಭದಲ್ಲಿ ವಿಪರೀತ ನೋವು ಹಾಗೂ ಉರಿ ಉಂಟಾಗಲು ಪ್ರಾರಂಭ ಆಗುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಡಿಸುರಿಯ ಸಮಸ್ಯೆ ಎಂದು ಕರೆಯ ಲಾಗುತ್ತದೆ. ಇನ್ನು ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ!

ಈ ಕಾಯಿಲೆ ಕಂಡು ಬರಲು ಪ್ರಮುಖ ಕಾರಣಗಳ ಬಗ್ಗೆ ಹೇಳುವುದಾದರೆ, ಸರಿಯಾಗಿ ನೀರು ಕುಡಿಯದೇ ಇರುವುದು, ಅತೀಯಾಗಿ ಹುಳಿ ಹಾಗೂ ಮಸಾಲೆಯುಕ್ತ ಪದಾರ್ಥಗಳ ಸೇವನೆ, ಕೆಫೀನ್, ಹಾಗೂ ಕಾರ್ಬೊನೇಟೆಡ್ ಪಾನೀಯಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದಲೂ ಕೂಡ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಇನ್ನು ಈ ಸಮಸ್ಯೆಯ ರೋಗಲಕ್ಷಣಗಳ ಬಗ್ಗೆ ನೋಡುವುದಾದರೆ, ಮೂತ್ರ ವಿಸರ್ಜನೆ ವೇಳೆ ಉರಿಯುವುದು, ಮೂತ್ರ ವಿಸರ್ಜನೆಗೆ ಅವಸರ ಹಾಗೂ ಜನನಾಂಗದ ಭಾಗದಲ್ಲಿ ತುರಿಕೆ, ದದ್ದು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಬನ್ನಿ ಇಂದಿನ ಈ ಲೆಖನದಲ್ಲಿ ಮೂತ್ರನಾಳದ ಸೋಂಕಿನಿಂದ ಕಂಡು ಬರುವ ಉರಿಮೂತ್ರ ಸಮಸ್ಯೆಗೆ ಸೋರೆಕಾಯಿ ಜ್ಯೂಸ್ ಹೇಗೆಲ್ಲಾ ಉಪಯೋಗಕ್ಕೆ ಬರುತ್ತದೆ ಎನ್ನುವುದರ ಬಗ್ಗೆ ನೋಡೋಣ…

ಉರಿ ಮೂತ್ರ ಸಮಸ್ಯೆಗೆ ಪರಿಹಾರ

ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ನೀರಿನಾಂಶವನ್ನು ಒಳ ಗೊಂಡಿ ರುವ ಸೋರೆಕಾಯಿಯಲ್ಲಿ ಹಲವಾರು ಬಗೆಯ ಪೌಷ್ಟಿಕ ಸತ್ವಗಳು ಕಂಡು ಬರುವುದರಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಎನ್ನುವುದರಲ್ಲಿ ಎರಡು ಮಾತಿಲ್ಲ.ಅದರಲ್ಲೂ ಈ ತರಕಾರಿಯಿಂದ ರೆಡಿ ಮಾಡಿದ ಜ್ಯೂಸ್ ಉರಿ ಮೂತ್ರ ಸಮಸ್ಯೆಗೆ ಅತ್ಯುತ್ತಮ ಪರಿಹಾರ ಎಂದು ತಿಳಿದು ಬಂದಿದೆ.​

ಈ ತರಕಾರಿಯಲ್ಲಿ ಮೂತ್ರವರ್ಧಕ ಗುಣ ಯಥೇಚ್ಛವಾಗಿ ಕಂಡು ಬರುತ್ತದೆ

ಪ್ರಮುಖವಾಗಿ ಈ ತರಕಾರಿಯಲ್ಲಿ ಇರುವಂತಹ ಮೂತ್ರ ವರ್ಧಕ ಗುಣವು, ಮೂತ್ರಕೋಶದಲ್ಲಿ ಕಂಡುಬರುವ ಸೋಂಕನ್ನು ತಡೆಯುವುದು ಮತ್ತು ಅದನ್ನು ಶಮನ ಮಾಡುವುದು.ಹೀಗಾಗಿ ಉರಿ ಮೂತ್ರದ ಸಮಸ್ಯೆಯಿಂದ ಬಳಲುತ್ತಿ ರುವವರು, ಪ್ರತಿದಿನ ಸೋರೆಕಾಯಿ ಬಳಸಿ ಮಾಡಿದ, ಜ್ಯೂಸ್ ಕುಡಿಯುವುದರಿಂದ ದೇಹದ ಮೇಲೆ ತಂಪಿನ ಪ್ರಭಾವ ಉಂಟಾಗಿ, ಉರಿ ಮೂತ್ರ ಸಮಸ್ಯೆ ಪರಿಹಾರ ವಾಗುತ್ತದೆ.​

ಸೊರೆಕಾಯಿ ಜ್ಯೂಸ್ ರೆಡಿ ಮಾಡುವ ವಿಧಾನ

ಮೊದಲಿಗೆ ಒಂದು ಮಧ್ಯಮ ಗಾತ್ರದ ಸೋರೆಕಾಯಿ ಯನ್ನು ಚೆನ್ನಾಗಿ, ತೊಳೆದು, ಮೇಲ್ಭಾಗದ ಸಿಪ್ಪೆಯನ್ನು ಸುಲಿದುಕೊಳ್ಳಿ.ಆ ಬಳಿಕ ಇದನ್ನು ಸಣ್ಣಸಣ್ಣ ಹೋಳುಗಳನ್ನಾಗಿ ಕತ್ತರಿಸಿ ಕೊಂಡು, ಮಿಕ್ಸಿಯ ಜಾರ್‌ಗೆ ಹಾಕಿ ಕೊಂಡು, ಒಂದು ಲೋಟ ನೀರನ್ನು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ,ಚೆನ್ನಾಗಿ ರುಬ್ಬಿ, ಜ್ಯೂಸ್ ರೀತಿ ಮಾಡಿಕೊಳ್ಳಿ. ಇನ್ನು ರುಚಿಗೆ ಒಂದು ಚಮಚದಷ್ಟು ನಿಂಬೆರಸವನ್ನು ಈ ಜ್ಯೂಸ್‌ಗೆ ಬೆರೆಸಿ, ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆ ಯಲ್ಲಿ, ಈ ಜ್ಯೂಸ್ ಅನ್ನು ಕುಡಿಯುವುದರಿಂದ ಮೂತ್ರ ನಾಳದ ಸೋಂಕು ದಿನಾ ಹೋದ ಹಾಗೆ ಕಡಿಮೆ ಯಾಗುತ್ತಾ ಬರುತ್ತದೆ.

ಸರಿಯಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳ ಬೇಕು ದಿನಕ್ಕೆ ಸರಾಸರಿ 2-3 ಲೀಟರ್ ನೀರು ಕುಡಿದರೆ, ಬಹಳ ಒಳ್ಳೆಯದು. ಸಾಧ್ಯವಾದರೆ ದಿನಕ್ಕೊಮ್ಮೆ ಒಂದು ಎಳನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಇನ್ನೂ ಒಳ್ಳೆಯದುಆಹಾರ ಕ್ರಮದಲ್ಲಿ, ಸಾಧ್ಯವಾದಷ್ಟು ವಿಟಮಿನ್ ಸಿ ಅಧಿಕವಾಗಿ ಇರುವಂತಹ ಆಹಾರಗಳನ್ನು ಸೇರಿಸಿಕೊಳ್ಳಿ. ಉದಾಹರಣೆಗೆ ಹೇಳುವುದಾದರೆ ಮುಖ್ಯವಾಗಿ ಕಿತ್ತಳೆ, ನಿಂಬೆ ರಸ, ಪೇರಳೆ, ಸ್ಟ್ರಾಬೆರಿ ಹಣ್ಣು, ತರಕಾರಿಗಳಾದ ಬ್ರಾಕೋಲಿ, ಕೇಲ್, ದೊಣ್ಣೆ ಮೆಣಸನ್ನು ಹೆಚ್ಚಾಗಿ ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.ಕೆಫಿನ್ ಅಂಶ ಹೆಚ್ಚಿರುವ ಕಾಫಿ, ಬುರುಗು ಬರುವ ಪಾನೀಯಗಳು ಅಂದರೆ, ಕಾರ್ಬೋನೇಟೆಡ್ ಪಾನೀಯ ಗಳು, ಕೃತಕ ಸಿಹಿ, ಚಾಕಲೇಟ್, ಮಸಾಲೆಯುಕ್ತ ಆಹಾರ ಗಳನ್ನು ಆದಷ್ಟು ಮಿತವಾಗಿ ಸೇವಿಸಿ .

Related Post

Leave a Comment