ಈ ಹಣ್ಣುಗಳನ್ನು ಈ ಕಾಯಿಲೆ ಇದ್ದವರು ಸೇವಿಸುವ ಮುನ್ನ ದಯವಿಟ್ಟು ನೋಡಿ!

ಮನುಷ್ಯನ ದೇಹದ ರಕ್ತ ಕಣಗಳಲ್ಲಿ ಹಿಮೋಗ್ಲೋಬಿನ್ ಅಂಶ ಉನ್ನತ ಮಟ್ಟದಲ್ಲಿ ಇರಬೇಕು. ಒಂದು ವೇಳೆ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇದ್ದರೆ, ದೇಹದಲ್ಲಿ ಕೆಂಪು ರಕ್ತಕಣಗಳು ಕೂಡ ಕಡಿಮೆಯಾಗಿದೆ ಎನ್ನುವುದನ್ನು ಸೂಚಿಸುತ್ತದೆ. ಅಲ್ಲದೆ ಆಗಾಗ ಆರೋಗ್ಯದಲ್ಲಿಯೂ ಕೂಡ ಏರುಪೇರು ಉಂಟಾಗುತ್ತದೆ. ಉದಾಹರಣಗೆ ಇದ್ದಕ್ಕಿ ದಂತೆ ಬಳಲಿಕೆ,ಸುಸ್ತು ಆಯಾಸ, ತಲೆನೋವು, ಉಸಿರಾಟದಲ್ಲಿ ಏರುಪೇರು ಉಂಟಾಗಿ,ಹೃದಯ ಬಡಿತ ಹೆಚ್ಚಾಗುವುದು ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲು ಶುರುವಾಗುತ್ತದೆ.

ಈ ಬಗ್ಗೆ ವೈದ್ಯರು ಹೇಳುವ ಪ್ರಕಾರ, ಹಿಮೋಗ್ಲೋಬಿನ್ ಮಟ್ಟವು ಪುರುಷರಲ್ಲಿ 14ರಿಂದ 18 ಜಿ/ಡಿಎಲ್ ಹಾಗೂ ಮಹಿಳೆಯರಲ್ಲಿ 12ರಿಂದ16 ಜಿ/ಡಿಎಲ್ ಇರಬೇಕು ಎಂದು ಸಲಹೆ ನೀಡುತ್ತಾರೆ. ಒಂದು ವೇಳೆ ಇದಕ್ಕಿಂತ ಕಡಿಮೆ ಇದ್ದರೆ, ಇದನ್ನು ರಕ್ತಹೀನತೆ ಎಂದು ಕರೆಯಲಾಗುತ್ತದೆ. ಇಂದಿನ ಲೇಖನದಲ್ಲಿ ಹಿಮೋಗ್ಲೋಬಿನ್ ಅಂಶ ವನ್ನು ನೈಸರ್ಗಿಕವಾಗಿ ಹೆಚ್ಚಿಸಲು ನೆರವಾಗುವ ಹಣ್ಣುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ ಮುಂದೆ ಓದಿ..

ವಿಟಮಿನ್ ಸಿ ಹೆಚ್ಚಾಗಿರುವ ಹಣ್ಣುಗಳನ್ನು ಸೇವನೆ ಮಾಡಿ…

ವಿಟಮಿನ್ ಸಿ ಹೆಚ್ಚಾಗಿರುವ ಹಣ್ಣುಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ನಾವು ಪ್ರತಿದಿನ ಸೇವಿಸುವ, ಆಹಾರಗಳಲ್ಲಿ ಕಂಡುಬರುವ ಕಬ್ಬಿಣದಾಂಶವನ್ನು ದೇಹ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ವಿಟಮಿನ್ ಸಿ ಹೆಚ್ಚಾಗಿರುವ ಹಣ್ಣು ಗಳಾದ ಮೂಸಂಬಿ, ಕಿತ್ತಳೆ, ಸೀಬೆಹಣ್ಣು, ಪಪ್ಪಾಯಿ ಇತ್ಯಾದಿ ಹಣ್ಣು ಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.

ದಿನಕ್ಕೊಂದು ಸೇಬು ಹಣ್ಣು ಸೇವನೆ ಮಾಡಿ…

ದಿನಕ್ಕೊಂದು ಸೇಬು ಹಣ್ಣನ್ನು ತಿನ್ನುವುದರಿಂದ ವೈದ್ಯರಿಂದ ದೂರ ಇರಬಹುದು, ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಇದಕ್ಕೆ ಮುಖ್ಯ ಕಾರಣ, ಈ ಹಣ್ಣಿನಲ್ಲಿ ಸಿಗುವ ಹಲವಾರು ರೀತಿಯ ಪೌಷ್ಟಿಕ ಸತ್ವಗಳು, ಮನುಷ್ಯನ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ದೂರವಿಡುವುದು.

ಸೇಬಿನಲ್ಲಿ ವಿವಿಧ ರೀತಿಯ ವಿಟಮಿನ್ ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್ ಗಳಾಗಿರುವಂತಹ ವಿಟಮಿನ್ ಸಿ ಅಂಶ, ಅಧಿಕ ಪ್ರಮಾಣ ದಲ್ಲಿ ಕಂಡುಬರುವುದರಿಂದ ರಕ್ತದಲ್ಲಿ ಹಿಮೋ ಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುವುದು. ಹೀಗಾಗಿ ದಿನಕ್ಕೊಂದು ಸೇಬು ತಿನ್ನುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ದಾಳಿಂಬೆ ಹಣ್ಣು

ಹುಳಿಸಿಹಿಯಾದ ಕಿತ್ತಳೆ-ಮೂಸಂಬಿ ಹಣ್ಣು, ದಾಳಿಂಬೆ ಹಣ್ಣು, ಸೇಬು ಹಣ್ಣು ಇವೆಲ್ಲಾ ಹಣ್ಣುಗಳು ಕೂಡ ಮನುಷ್ಯನ ಆರೋ ಗ್ಯದ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರುತ್ತವೆ. ಪ್ರಮುಖ ವಾಗಿ ರಕ್ತದಲ್ಲಿ ಹಿಮೋ ಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸು ವಲ್ಲಿ, ಈ ಹಣ್ಣುಗಳ ಪಾತ್ರ ಬಲು ದೊಡ್ಡದು.

ವಿಶೇಷವಾಗಿ ದಾಳಿಂಬೆ ಹಣ್ಣಿನಲ್ಲಿ ದೇಹದ ರಕ್ತದ ಕಣಗಳನ್ನು ಹೆಚ್ಚು ಮಾಡುವ, ಆರೋಗ್ಯಕಾರಿ ಗುಣಲಕ್ಷಣಗಳು ಕಂಡು ಬರುತ್ತದೆ.

ಇದರಿಂದ ದೇಹದ ಕೆಂಪು ರಕ್ತಕಣಗಳ ಪ್ರಮಾಣವು ಕೂಡ ಹೆಚ್ಚಾಗಿ ಹಿಮೋಗ್ಲೋಬಿನ್ ಮಟ್ಟ ವೃದ್ಧಿಯಾಗುತ್ತದೆ. ಸಾಧ್ಯ ವಾದರೆ ದಿನಾ ಒಂದು ಲೋಟ ದಾಳಿಂಬೆ ಹಣ್ಣಿನ ರಸವನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.

ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣಿನ ಜ್ಯೂಸ್ ಅಥವಾ ಈ ಹಣ್ಣನ್ನು ಸಲಾಡ್‍ನ ರೀತಿ ಯಲ್ಲಿ, ದಿನಾ ಸೇವಿಸಿದರೆ ಆರೋಗ್ಯದಲ್ಲಿ ಸಾಕಷ್ಟು ಪ್ರಯೋಜನ ಗಳನ್ನು ಪಡೆದು ಕೊಳ್ಳಬಹುದು. ವಿಶೇಷಾಗಿ ಹೃದಯಕ್ಕೆ ಸಂಬಂ ಧಿಸಿದ ಸಮಸ್ಯೆಗಳು, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ನಂತಹ ಮಾರಕ ರೋಗವನ್ನು ಕೂಡ ದೂರವಿರಿಸಬಹುದು.

ಹಾಗಂತ ಈ ಹಣ್ಣಿನ ಪ್ರಯೋಜನಗಳು ಇಷ್ಟಕ್ಕೆ ಮಾತ್ರ ಸೀಮಿತ ವಾಗಿಲ್ಲ, ಬದಲಿಗೆ ಇದರಲ್ಲಿರುವ ಪ್ರಬಲ ಆಂಟಿ ಆಕ್ಸಿಡೆಂಟ್ ಅಂಶಗಳು ಹಾಗೂ ವಿಟಮಿನ್ ಸಿ ಅಂಶವು, ರಕ್ತದಲ್ಲಿ ಹಿಮೋ ಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಿಗೆ ಬರುತ್ತದೆ. ​

ಕಲ್ಲಂಗಡಿ ಹಣ್ಣು

ಮಾರುಕಟ್ಟೆಯಲ್ಲಿ ಕಲ್ಲಂಗಡಿ ಹಣ್ಣುಗಳ ಕಾರುಬಾರು ಶುರುವಾಗಿದೆ. ತನ್ನಲ್ಲಿ ಅಧಿಕ ಪ್ರಮಾಣದಲ್ಲಿ ನೀರಿನಾಂಶ ವನ್ನು ಒಳಗೊಂಡಿರುವ ಈ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಲೈಕೋಪಿನ್ ಅಂಶ ಅಧಿಕ ಪ್ರಮಾಣ ದಲ್ಲಿ ಕಂಡು ಬರುತ್ತದೆ. ಹೀಗಾಗಿ ಈ ಹಣ್ಣನ್ನು ಸೇವನೆ ಮಾಡುವುದರಿಂದ ಅಥವಾ ಇದರ ಜ್ಯೂಸ್ ಮಾಡಿ ಕುಡಿಯು ವುದರಿಂದ, ರಕ್ತದಲ್ಲಿ ಹಿಮೋ ಗ್ಲೋಬಿನ್ ಪ್ರಮಾಣವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಲು ನೆರವಾ ಗುತ್ತದೆ.

Related Post

Leave a Comment