ಬೆನ್ನು ನೋವು ಬರುವುದಕ್ಕೆ ಈ ಆಹಾರವೆ ಮುಖ್ಯ ಕಾರಣ!

ಕೆಲವು ಆಹಾರಗಳು ಬೆನ್ನು ನೋವಿನಂತಹ ಅನೇಕ ಸಮಸ್ಯೆ ಉಂಟು ಮಾಡಬಹುದು. ವಾಸ್ತವದಲ್ಲಿ ನಿಮ್ಮ ಕೆಳ ಬೆನ್ನು ಮತ್ತು ಬೆನ್ನು ನೋವಿನಲ್ಲಿ ಸಮಸ್ಯೆ ಉಂಟು ಮಾಡುವ ಕೆಲವು ಆಹಾರಗಳಿವೆ. ನೀವು ಬೆನ್ನು ನೋವು ಅನುಭವಿಸುತ್ತಿದ್ದರೆ ಆರೋಗ್ಯಕರ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ ಆಗಿದೆ.

ಕೆಟ್ಟ ಜೀವನಶೈಲಿ ಹಾಗೂ ಅನಾರೋಗ್ಯಕರ ಆಹಾರವು ಹಲವು ಗಂಭೀರ ಕಾಯಿಲೆಗಳು ಉಂಟಾಗಲು ಕಾರಣವಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ವಾತಾವರಣ ಸಹ ವಿಷಮಯವಾಗುತ್ತಿದ್ದು, ಜನರು ಹೆಚ್ಚು ಮಾರಣಾಂತಿಕ ಕಾಯಿಲೆ ಎದುರಿಸುವಂತಾಗಿದೆ. ಅದರಲ್ಲೂ ನಾವು ತಿನ್ನುವ ಆಹಾರ ನಮ್ಮ ಆರೋಗ್ಯದ ಮೇಲೆ ಬಹುಬೇಗ ಪ್ರಭಾವ ಬೀರುತ್ತದೆ. ನಾವು ತಿನ್ನುವ ಆಹಾರವು ನಮ್ಮ ದೈನಂದಿನ ಜೀವನದ ಸಮಸ್ಯೆಗೆ ಕಾರಣ ಆಗುತ್ತದೆ. ನಾವು ತಿನ್ನುವ ಆಹಾರ ಪದಾರ್ಥಗಳು ಮತ್ತು ಆಹಾರ ಕ್ರಮವು ದೇಹ ರಚನೆ ಮತ್ತು ಆರೋಗ್ಯಕರವಾಗಿರಲು ನಮಗೆ ಸಹಾಯ ಮಾಡುತ್ತದೆ.

ಆಹಾರ ಕ್ರಮ ಮತ್ತು ಬೆನ್ನು ನೋವು

ಕೆಲವು ಆಹಾರಗಳು ಬೆನ್ನು ನೋವಿನಂತಹ ದಿನದಲ್ಲಿ ಅನೇಕ ಸಮಸ್ಯೆ ಉಂಟು ಮಾಡಬಹುದು. ವಾಸ್ತವದಲ್ಲಿ ನಿಮ್ಮ ಕೆಳ ಬೆನ್ನು ಮತ್ತು ಬೆನ್ನು ನೋವಿನಲ್ಲಿ ಸಮಸ್ಯೆ ಉಂಟು ಮಾಡುವ ಕೆಲವು ಆಹಾರಗಳಿವೆ. ನೀವು ಬೆನ್ನು ನೋವು ಅನುಭವಿಸುತ್ತಿದ್ದರೆ, ಆರೋಗ್ಯಕರ ಆಹಾರ ಅನುಸರಿಸುವುದು ತುಂಬಾ ಮುಖ್ಯ ಆಗಿದೆ.

ಪೌಷ್ಠಿಕಾಂಶವುಳ್ಳ ಆಹಾರ ಸೇವಿಸುವ ಮೂಲಕ ನೀವು ಬೇಗನೆ ಬೆನ್ನು ನೋವಿನಿಂದ ಚೇತರಿಕೆ ಕಾಣಬಹುದು. ಆರೋಗ್ಯಕರ ಆಹಾರ ಸೇವಿಸದೇ ಇರುವುದು ಬೆನ್ನು ನೋವಿನ ಗುಣಪಡಿಸುವ ಪ್ರಕ್ರಿಯೆ ನಿಧಾನ ಮಾಡುತ್ತದೆ.

ಅನಾರೋಗ್ಯಕರ ಆಹಾರ ಸೇವನೆ ಬೆನ್ನಿನಲ್ಲಿ ಉರಿಯೂತ ಉಂಟು ಮಾಡುತ್ತದೆ. ಇದು ನೋವನ್ನು ಮತ್ತಷ್ಟು ಹದಗೆಡಿಸುತ್ತದೆ. ಹಾಗಾದ್ರೆ ಬೆನ್ನು ನೋವಿದ್ದಾಗ ಯಾವ ಆಹಾರ ಸೇವಿಸಬಾರದು ಎಂದು ನೋಡೋಣ.

ಸಂಸ್ಕರಿಸಿದ ಎಣ್ಣೆ ಸೇವನೆ ಬೇಡ

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಸಸ್ಯಜನ್ಯ ಎಣ್ಣೆಯು ಉರಿಯೂತ ಮತ್ತು ಹೃದಯ ಕಾಯಿಲೆಗೆ ಕಾರಣ ಆಗಬಹುದು. ಅಡುಗೆ ಮಾಡುವಾಗ ನೀವು ಸಸ್ಯಜನ್ಯ ಎಣ್ಣೆ ಬಳಸಲು ಇಷ್ಟ ಪಟ್ಟರೆ ನೀವು ಸಣ್ಣ ಪ್ರಮಾಣದಲ್ಲಿ ಮಾತ್ರ ಬಳಸಬೇಕು. ಮೊನೊಸಾಚುರೇಟೆಡ್ ಕೊಬ್ಬನ್ನು ಒಳಗೊಂಡಿರುವ ಕಾರಣ ಆಲಿವ್ ಎಣ್ಣೆ ಆರೋಗ್ಯಕರ ಆಗಿದೆ.

ಸಂಸ್ಕರಿಸಿದ ಆಹಾರಗಳು

ಸಂಸ್ಕರಿಸಿದ ಆಹಾರದ ಬದಲಿಗೆ ಧಾನ್ಯ ತಿನ್ನುವುದು ಉತ್ತಮ. ಪಿಜ್ಜಾ, ಮತ್ತು ಬಿಳಿ ಬ್ರೆಡ್ ಹೆಚ್ಚಿನ ಪ್ರಮಾಣದ ಸಂಸ್ಕರಿಸಿದ ಧಾನ್ಯ ಒಳಗೊಂಡಿರುವ ಕೆಲವು ಆಹಾರ ಆಗಿವೆ. ಸಂಸ್ಕರಿಸಿದ ಧಾನ್ಯಗಳಲ್ಲಿ ಹೆಚ್ಚಿನ ಆಹಾರಗಳು ಇನ್ಸುಲಿನ್ ಸ್ಪೈಕ್ ಅನ್ನು ಉಂಟು ಮಾಡಬಹುದು. ಇದು ಉರಿಯೂತ ಉಂಟು ಮಾಡುತ್ತದೆ.

ಡೈರಿ ಆಹಾರಗಳು

ಹಾಲು ಮತ್ತು ಇತರ ಡೈರಿ ಉತ್ಪನ್ನಗಳು ಆರೋಗ್ಯಕರ ಆಹಾರದ ಪಟ್ಟಿಗೆ ಸೇರುತ್ತವೆ. ಆದರೆ ಪ್ರತಿ ಸಮಸ್ಯೆಯಲ್ಲೂ ಅವು ಆರೋಗ್ಯಕರವಲ್ಲ. ಡೈರಿ ಆಹಾರಗಳು ಹೊಟ್ಟೆ ಉಬ್ಬುವಿಕೆ ಉಂಟು ಮಾಡುತ್ತವೆ. ಅನೇಕ ಜನರು ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿದ್ದಾರೆ. ಅವರು ಡೈರಿ ಉತ್ಪನ್ನ ಸೇವಿಸಿದರೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.

ಸಿಹಿ ಪದಾರ್ಥ ಸೇವಿಸಬೇಡಿ

ಹೆಚ್ಚಿನ ಸಕ್ಕರೆ ಆಹಾರಗಳು ಕೆಟ್ಟ ಆಹಾರಗಳಲ್ಲಿ ಒಂದಾಗಿದ್ದು, ಆರೋಗ್ಯ ಹಾಳು ಮಾಡುತ್ತವೆ. ಹಾರ್ವರ್ಡ್ ಹೆಲ್ತ್ ಜರ್ನಲ್ ಪ್ರಕಾರ, ಸಿಹಿ ಆಹಾರಗಳು ಉರಿಯೂತ ಉಂಟು ಮಾಡಬಹುದು. ಜೊತೆಗೆ ತೂಕ ಹೆಚ್ಚಾಗಲು ಕಾರಣ ಆಗುತ್ತವೆ.

ಹೆಚ್ಚಿದ ತೂಕವು ಬೆನ್ನು ನೋವನ್ನು ಉಂಟು ಮಾಡುತ್ತದೆ. ಮತ್ತು ಸ್ಥಿತಿ ಮತ್ತಷ್ಟು ಹದಗೆಡಿಸುತ್ತದೆ. ಹಾಗಾಗಿ ನೀವು ಕೃತಕ ಸಿಹಿಕಾರಕ ಹೊಂದಿರುವ ಆಹಾರ ಸೇವನೆ ತಪ್ಪಿಸಬೇಕು. ಏಕೆಂದರೆ ಅವು ಉರಿಯೂತ ಉಂಟು ಮಾಡಬಹುದು.

ಕೆಂಪು ಮಾಂಸ

ಕೆಂಪು ಮಾಂಸವು ಪ್ರೋಟೀನ್‌ ನ ಉತ್ತಮ ಮೂಲ ಆಗಿದೆ. ಆದರೆ ನೀವು ಬೆನ್ನು ನೋವಿನಿಂದ ಬಳಲುತ್ತಿದ್ದರೆ ಕೆಂಪು ಮಾಂಸ ಸೇವನೆ ತಪ್ಪಿಸಿ. ಹಾರ್ವರ್ಡ್ ಹೆಲ್ತ್ ಜರ್ನಲ್ ಪ್ರಕಾರ, ಕೆಂಪು ಮಾಂಸವು neu5gc ಎಂಬ ವಸ್ತು ಹೊಂದಿದೆ. ಇದು ಉರಿಯೂತ ಉಂಟು ಮಾಡುತ್ತದೆ.

Related Post

Leave a Comment