ಸ್ನಾನ ಮಾಡಿ ಹೊರಬರುವಾಗ ಮಾಡುವ ಈ ತಪ್ಪು ಬಡತನ ತರುತ್ತೆ!

ಬಾತ್ ರೂಮ್ ನಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ. ಮನೆ ಕಟ್ಟುವಾಗ ವಾಸ್ತು ನೋಡುವುದು ಕಾಮನ್. ಬೆಡ್ ರೂಮ್ ಕಿಚನ್ ಹೀಗೆ ಎಲ್ಲದಕ್ಕೂ ವಾಸ್ತು ಅನ್ನೋದನ್ನ ನೋಡುತ್ತೇವೆ. ಆದ್ರೆ ಬಾತ್ ರೂಮ್ ಹಾಗು ಟಾಯ್ಲೆಟ್ ಗು ಕೂಡ ವಾಸ್ತು ನೋಡುವುದು ತುಂಬಾ ಅಗತ್ಯ. ವಾಸ್ತು ಪ್ರಕಾರ ಇವುಗಳನ್ನು ಕಟ್ಟಿದರೆ ಒಳ್ಳೆಯದು. ಇಲ್ಲವಾದರೆ ಇದರಿಂದ ನಕಾರಾತ್ಮಕತೆ ಸಮಸ್ಸೆ ಆಗುವುದು ಹೆಚ್ಚು.

ಮನೆಯಲ್ಲಿ ಬಾತ್ ರೂಮ್ ಅನ್ನು ವಾಯುವ್ಯಾ ದಿಕ್ಕಿನಲ್ಲಿ ನಿರ್ಮಿಸುವುದು ಉತ್ತಮ. ವಾಸ್ತು ಪ್ರಕಾರ ಇದು ತ್ಯಾಜ್ಯವನ್ನು ಹೊರ ಹಾಕುವುದಕ್ಕೆ ಇದು ಸೂಕ್ತವಾದ ದಿಕ್ಕು.

ಬಾತ್ ರೂಮ್ ಗೆ ಹೀಗೆ ಮೆಟಲ್ಸ್ ಇರದಂತೆ ಮಾಡ್ರನ್ ಲುಕ್ ಕೊಡುವ ಬಾಗಿಲನ್ನು ಬಳಸುತ್ತಾರೆ. ಅದರೆ ಬಾತ್ ರೂಮ್ ಗೆ ಮರದ ಬಾಗಿಲು ಅಳವಡಿಸುವುದು ವಾಸ್ತು ಪ್ರಕಾರ ಹೆಚ್ಚು ಸೂಕ್ತ. ಮೆಟಲ್ ಬಾಗಿಲು ನಕಾರಾತ್ಮಕ ಶಕ್ತಿಯನ್ನು ಅಕರ್ಶಿಸುವ ಸಾಧ್ಯತೆ ಇರುತ್ತದೆ. ಅಲ್ಲದೆ ಇದರಿಂದ ಆರೋಗ್ಯದ ಮೇಲೆ ಇದರಿಂದ ವಿತರಿಕ್ತಾ ಪರಿಣಾಮ ಉಂಟಾಗಬಹುದು. ಎಲ್ಲಾ ಸಮಯದಲ್ಲಿ ಬಾತ್ ರೂಮ್ ಬಾಗಿಲು ಮುಚ್ಚಿರುವಂತೆ ನೋಡಿಕೊಳ್ಳಿ. ಇದರಿಂದ ನಕಾರಾತ್ಮಕ ಶಕ್ತಿ ನಿಮ್ಮ ಮನೆ ಪ್ರವೇಶ ಮಾಡುವುದನ್ನು ತಡೆಯಬಹುದು.ಅಲ್ಲದೆ ನಿಮ್ಮ ವೃತ್ತಿ ಹಾಗು ವೈಯಕ್ತಿಕ ಸಂಬಂಧಗಳಲ್ಲಿ ಯಾವುದೇ ಅಡ್ಡಿ ಆತಂಕಗಳು ಸೃಷ್ಟಿ ಆಗುವುದಿಲ್ಲ.

ಬಾತ್ ರೂಮ್ ಬಾಗಿಲ ಮೇಲೆ ಯಾವುದೇ ಕಾರಣಕ್ಕೂ ದೇವರ ಮೂರ್ತಿಗಳು ಹಾಗು ದೇವರ ಚಿತ್ರಗಳು ಕೆತ್ತನೆ ಮಾಡಬಾರದು.

ಇನ್ನು ಬೆಡ್ ರೂಮ್ ಮತ್ತು ಟಾಯ್ಲೆಟ್ ಹಾಗು ಕಿಚನ್ ಒಂದೇ ಗೋಡೆಗೆ ಅಂಟಿಕೊಂಡಿದ್ದಾರೆ ಮನೆ ಸದ್ಯಸರಿಗೆ ಕೆಟ್ಟ ಕನಸುಗಳು ಕಾಡುವ ಸಾಧ್ಯತೆ ಹೆಚ್ಚು.

ತ್ಯಾಜ್ಯ ನೀರು ಹೋಗುವುದಕ್ಕೆ ಪೂರ್ವ ಹಾಗು ಈಶನ್ಯ ಉತ್ತರ ದಿಕ್ಕಿಗೆ ಇರಬೇಕು. ಇದರಿಂದ ತ್ಯಾಜ್ಯ ನೀರು ಇದೆ ದಿಕ್ಕಿನಿಂದ ಹೋಗುತ್ತದೆ.

ಟಾಯ್ಲೆಟ್ ಪಶ್ಚಿಮ ಮತ್ತ್ಯಾ ನೈರುತ್ಯ ದಿಕ್ಕಿನಲ್ಲಿ ಇರಬೇಕು.ಎಕ್ಸಾಸ್ಟ್ ಫ್ಯಾನ್ ಪೂರ್ವ ಅಥವಾ ಈಶನ್ಯ ದಿಕ್ಕಿನಲ್ಲಿ ಇರಬೇಕು. ಇದರಿಂದ ತ್ಯಾಜ್ಯ ಗಾಳಿ ಮತ್ತು ಸೂರ್ಯನ ಕಿರಣಗಳು ಬಾತ್ ರೂಮ್ ಒಳಗೆ ಪ್ರವೇಶಿಸುವುದಕ್ಕೆ ಅನುಕೂಲ ಆಗುತ್ತದೆ.

ಬಾತ್ ರೂಂನಲ್ಲಿ ಕನ್ನಡಿಗಳನ್ನು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡಬೇಕು. ಪವರ್ ಇರುವ ವಸ್ತುಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದು ಉತ್ತಮ. ಬಾತ್ ರೂಂ ಬಾಗಿಲು ಕೂಡ ಈಶಾನ್ಯ ದಿಕ್ಕಿನಲ್ಲಿದ್ದರೆ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎನ್ನಲಾಗುತ್ತದೆ,

ವಾಸ್ತುಶಾಸ್ತ್ರದ ಪ್ರಕಾರ, ಬಾತ್ ರೂಂನಲ್ಲಿರುವ ಸಿಂಕ್ ಹಾಗೂ ಶವರ್ ಅನ್ನು ಪೂರ್ವ, ಉತ್ತರ, ಈಶಾನ್ಯ ಭಾಗದಲ್ಲಿ ಇಡುವುದರಿಂದ ಒಳ್ಳೆಯದಾಗುತ್ತದೆ. ಇದರ ಜೊತೆಗೆ ಯಾವುದೇ ಯಂತ್ರಗಳನ್ನು ಬಳಕೆ ಮಾಡುತ್ತಿದ್ದರೆ ಅದನ್ನು ಆಗ್ನೇಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಬೇಕು.

ಇತ್ತೀಚಿನ ದಿನಗಳಲ್ಲಿ ಬಾತ್ ಟಬ್ ಸಾಮಾನ್ಯವಾಗಿದೆ. ಆದರೆ ಇವುಗಳನ್ನು ಉತ್ತರ, ಪೂರ್ವ, ಪಶ್ಚಿಮ ಅಥವಾ ಈಶಾನ್ಯ ದಿಕ್ಕಿನಲ್ಲಿ ಮಾತ್ರ ಇಡಬೇಕು. ಅಲ್ಲದೇ ಈ ಟಬ್ ರೌಂಡ್ ಅಥವಾ ಚೌಕವಾಗಿದ್ದರೆ ಉತ್ತಮ. ಇದರ ಜೊತೆ ತಿಳಿ ಬಣ್ಣದ ಬಾತ್ ಟಬ್ ಒಳ್ಳೆಯದು ಎನ್ನಲಾಗುತ್ತದೆ.

ಕೊಠಡಿಗಳ ಬಣ್ಣಗಳು ವಿಭಿನ್ನ ಅಲೆ ಮತ್ತು ಕಂಪನಗಳನ್ನು ಹೊರಸೂಸುತ್ತವೆ. ಆದ್ದರಿಂದ, ಶೌಚಾಲಯಕ್ಕೆ ಅಪೇಕ್ಷಣೀಯ ಬಣ್ಣಗಳಲ್ಲಿ ತಿಳಿ ಮತ್ತು ಶಾಂತ ಛಾಯೆಗಳಾದ ಬಿಳಿ, ಗುಲಾಬಿ, ಆಕಾಶ ನೀಲಿ ಅಥವಾ ತಿಳಿ ಬೂದು ಸೂಕ್ತ. ಸಾಮಾನ್ಯವಾಗಿ ಹಗುರವಾದ ಅಥವಾ ಪ್ರಕಾಶಮಾನವಾದ ಛಾಯೆಗಳು ಶೌಚಾಲಯದಲ್ಲಿ ಧನಾತ್ಮಕ ಶಕ್ತಿ ಮತ್ತು ಕಂಪನಗಳನ್ನು ಹೊರಸೂಸುತ್ತವೆ ಎಂಬ ನಂಬಿಕೆ ಇದೆ.

Related Post

Leave a Comment