ಕಾಡು ಬಸಳೆ ಸೊಪ್ಪಿನ ಉಪಯೋಗಗಳು!

ಆಯುರ್ವೇದದಲ್ಲಿ ಈ ಎಲೆಗೆ ಮಹತ್ವವಾದಂತಹ ಪಾತ್ರವನ್ನು ಕೊಟ್ಟಿದ್ದಾರೆ ಇಂದಿಗೂ ಹಳ್ಳಿಗಳಲ್ಲಿ ಈ ಎಲೆಯನ್ನು ಬಳಸುತ್ತಿದ್ದಾರೆ ಮತ್ತು ಸಂಪೂರ್ಣವಾದ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಈ ಅಮೂಲ್ಯವಾದ ಗಿಡಮೂಲಿಕೆಯನ್ನು ಒಂದು ತಿಂದರೆ ಸಾಕು ನಿಮಗೆ ಸುಸ್ತು ಬಲಹೀನತೆ, ಕಿಡ್ನಿಯಲ್ಲಿ ಸ್ಟೋನ್ ಆಗುವುದು, ದೇಹದ ತೂಕ ಹೆಚ್ಚಾಗುವುದು, ಶುಗರ್, ಬೊಜ್ಜು, ಕೊಲೆಸ್ಟ್ರಾಲ್, ಹೊಟ್ಟೆಯ ಸಮಸ್ಯೆ,ಅಸಿಡಿಟಿ,ಗ್ಯಾಸ್, ಹೃದಯ ಸಂಬಂಧಿ ಎಲ್ಲಾ ಕಾಯಿಲೆಗಳು ಕಡಿಮೆಯಾಗುತ್ತದೆ.ಈ ಒಂದು ಎಲೆಯನ್ನು ತಿನ್ನುವುದರಿಂದ ಜೀವನಪೂರ್ತಿ ನಿರೋಗಿಯಾಗಿ ಇರಬಹುದು.

ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಈ ಎಲೆಯನ್ನು ತಿಂದು ಬಿಸಿನೀರನ್ನು ಕುಡಿದರೆ ಸಾಕು ನಿಮಗೆ ಇರುವಂತಹ ಎಲ್ಲಾ ಕಾಯಿಲೆಗಳು ಕಡಿಮೆಯಾಗುತ್ತದೆ. ಒಂದು ಎಲೆ ಇದ್ದರೆ ಸಾಕು ಹತ್ತು ಗಿಡವನ್ನು ನೆಡಬಹುದು.ಇದನ್ನು ಕಾಡು ಬಸಲೇ ಎಂದು ಕರೆಯುತ್ತಾರೆ, ಗಂಡು ಕಾಳಿಂಗ, ನಾಯಿ ಪತ್ರೆ ಎಂದು ಕರೆಯುತ್ತಾರೆ.ಈ ಎಲೆ ದೇಹದ ಒಳಗೂ ಮತ್ತು ದೇಹದ ಹೊರಗೂ ಕೂಡ ಕೆಲಸ ಮಾಡುತ್ತದೆ.

ಈ ಎಲೆಯನ್ನು ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಎಲೆಯನ್ನು ತಿನ್ನಬೇಕು ಮತ್ತು ಬಿಸಿ ನೀರು ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.ಇನ್ನು ಪಿತ್ತದ ಸಮಸ್ಸೆ ಮತ್ತು ಚರ್ಮದಲ್ಲಿ ಅಲರ್ಜಿ ಸಮಸ್ಸೆ ಇದ್ದರು ಕೂಡ ನಿವಾರಣೆ ಆಗುತ್ತದೆ.

ಇನ್ನು ಸುಸ್ತು ಬಲಹಿನತೆ ಇರುವವರು ಬೆಳಗ್ಗೆ ಎದ್ದ ತಕ್ಷಣ ಈ ಎಲೆಯನ್ನು ತಿಂದು ಬಿಸಿ ನೀರು ಕುಡಿದರೆ ಸಾಕು ಸುಸ್ತು ಬಲಹಿನತೆ ಎಲ್ಲಾ ಕಡಿಮೆ ಆಗುತ್ತದೆ.ಇನ್ನು ಮೂತ್ರಪಿಂಡದಲ್ಲಿ ಕಲ್ಲನ್ನು ಹೊರ ಹಾಕುವುದಕ್ಕೆ ಈ ಎಲೆ ತುಂಬಾನೇ ಸಹಾಯ ಮಾಡುತ್ತದೆ.

ಉಪಯೋಗಿಸುವ ರೀತಿ : ಈ ಕಾಡು ಬಸಲೇ ದೊಡ್ಡ ಎಲೆಯನ್ನು ತೆಗೆದುಕೊಳ್ಳಿ ಮತ್ತು 3 ಕರಿ ಮೆಣಸಿನಕಾಳು, ಒಂದು ಚಿಟಿಕೆ ಸೈಂಧವ ಲವಣ ಹಾಕಿ ಚೆನ್ನಾಗಿ ಜಗಿದು ತಿನ್ನಬೇಕು.ಇದನ್ನು ಸೇವಿಸಿದ ಮುಕ್ಕಾಲು ಗಂಟೆ ಯಾವುದೇ ಆಹಾರವನ್ನು ಸೇವಿಸಬಾರದು.ನಂತರ ಎಳನೀರು ಕುಡಿಯಬೇಕು ಮತ್ತು ಅರ್ಧ ಗಂಟೆ ಬಳಿಕ ತಿಂಡಿ ಸೇವನೆ ಮಾಡಬಹುದು.ಈ ರೀತಿ ಮಾಡಿದರೆ ನಿಮ್ಮ ಕಿಡ್ನಿಯಲ್ಲಿ ಕಲ್ಲನ್ನು ಹೊರ ಹಾಕಲ್ಪಡುತ್ತದೆ. ಕಿಡ್ನಿಯಲ್ಲಿ ಕಲ್ಲು ಇದ್ದವರು ಎಂಟು ದಿನ ಇದನ್ನು ಸೇವಿಸಬೇಕು.

ಕಾಡು ಬಸಲೇ ಚೆಟ್ನಿ ಮಾಡುವ ವಿಧಾನ : ಕಾಡು ಬಸಲೆ, ಹಸಿಮೆಣಸು,ಕಾಯಿತುರಿ 2 ಚಮಚ ಕಡಲೆಬೇಳೆ ಹುರಿದಿದ್ದು 1 ಚಮಚ,3 ಎಸಳು ಬೆಳ್ಳುಳ್ಳಿ ಹುರಿದಿದ್ದು, ಉಪ್ಪು ರುಚಿಗೆ ತಕ್ಕಷ್ಟು. ಎಲ್ಲವನ್ನು ಹಾಕಿ ಚೆನ್ನಾಗಿ ರುಬ್ಬಬೇಕು ಮತ್ತು ಇದನ್ನು ಅನ್ನ ಅಥವಾ ರೊಟ್ಟಿಯ ಜೊತೆ ಸೇವನೆ ಮಾಡಬೇಕು.

ಇನ್ನು ಕೊಲೆಸ್ಟ್ರಾಲ್ ಪ್ರಾಬ್ಲಮ್ ಇರುವವರು ಈ ಎಲೆಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಜ್ಯೂಸ್ ಅನ್ನು ಮಾಡಿಕೊಂಡು ಕುಡಿಯುವುದರಿಂದ ಈ ರೀತಿಯ ಎಲ್ಲಾ ಸಮಸ್ಯೆಗಳು ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೇ ಹೃದಯ ಸಂಬಂಧಿಸಿದ ಎಲ್ಲಾ ಕಾಯಿಲೆಗಳು ಕಡಿಮೆಯಾಗುತ್ತದೆ. ಇನ್ನು ಡೈಜೆಶನ್ ಇಂಪ್ರೂ ಆಗುವುದರಿಂದ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.ಇದರಿಂದ ದೇಹದ ತೂಕ ಹೆಚ್ಚಾಗುವುದಿಲ್ಲ. ಇನ್ನು ಈ ಎಲೆಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಕಣ್ಣಿನ ಸಮಸ್ಯೆ ಮತ್ತು ದೃಷ್ಟಿ ದೋಷ ಇದ್ದರೆ ನಿವಾರಣೆಯಾಗುತ್ತದೆ.

Related Post

Leave a Comment