ದಿನ ಖಾಲಿ ಹೊಟ್ಟೆಯಲ್ಲಿ ಸಣ್ಣ ತುಂಡು ಬೆಲ್ಲ ತಿನ್ನೋದ್ರಿಂದ ಪರಿಣಾಮ ಏನಾಗತ್ತೆ!

ಬೆಲ್ಲವನ್ನು ತಿನ್ನುವುದರಿಂದ ನಮ್ಮ ಶರೀರಕ್ಕೆ ಆಗುವ ಲಾಭಗಳೇನು ಎಂಬುದು ಗೊತ್ತಾದರೆ ಯಾರು ಕೂಡ ಬೆಲ್ಲವನ್ನು ಎಂದಿಗೂ ನಿರ್ಲಕ್ಷಿಸುವುದಿಲ್ಲ. ಹಿಂದಿನ ಕಾಲದಿಂದಲೂ ನಮ್ಮ ಹಿರಿಯರು ಬೆಲ್ಲದ  ಬಗೆಗಿನ ಲಾಭವನ್ನು ತಿಳಿಸುತ್ತಲೇ ಬಂದಿದ್ದಾರೆ.  ಹಿಂದೆ ಬೆಲ್ಲವನ್ನು ಯಥೇಚ್ಛವಾಗಿ ಪ್ರತಿನಿತ್ಯ ಬಳಸಲಾಗುತ್ತಿತ್ತು ಆದರೆ ಇಂದು ಶೇ 1 ರಷ್ಟು   ಜನರು ಮಾತ್ರ ಬೆಲ್ಲವನ್ನು ಬಳಸುತ್ತಿದ್ದಾರೆ . ಇಂದಿನ ದಿನಗಳಲ್ಲಿ ಹಬ್ಬ ಹರಿ ದಿನಗಳನ್ನು ಬಿಟ್ಟರೆ ಬೇರೆ ದಿನಗಳಲ್ಲಿ ಬೆಲ್ಲಗಳನ್ನು ಬಳಸುವುದೇ ಇಲ್ಲ. ಇಂದು ನಾವು ಬಳಸುವಂತಹ  ಬಿಳಿ ಸಕ್ಕರೆ,  ಹಾಲು,  ಮೈದಾ,   ಉಪ್ಪು , ಪಾಲಿಶ್ ಮಾಡಿದ ಅಕ್ಕಿ , ಅವುಗಳನ್ನು ವಿಜ್ಞಾನಿಗಳು ಐದು ಬಿಳಿಯ ಪಾಯ್ಸನ್ ಎಂದು ಕರೆದಿದ್ದಾರೆ.

ಇವುಗಳ ಮೇಲೆ ಯಾವುದೇ ನಿಯಂತ್ರಣವನ್ನು ಏರಿಲ್ಲ ಏಕೆಂದರೆ ಇದನ್ನೇ ಅವಲಂಬಿಸಿರುವಂತಹ ಉದ್ಯಮಗಳು, ಅದನ್ನೇ  ಆದರಿಸಿರುವಂತಹ ಸರ್ಕಾರ , ಎಲ್ಲಿಯವರೆಗೆ  ಗ್ರಾಹಕರು ತಾವಾಗಿಯೇ ಈ ಐದು ಬಿಳಿ  ಪಾಯ್ಸನ್ ಗಳನ್ನು ತ್ಯಜಿಸುವುದಿಲ್ಲವೊ ಅಲ್ಲಿಯ ವರೆಗೂ ಇವುಗಳ ಮಾರಾಟ ಮುಂದುವರಿಯುತ್ತದೆ. ಸಾವಿರಾರು  ವರ್ಷಗಳ ಹಿಂದೆ ಬೆಲ್ಲವು ಬಳಕೆಗೆ ಬಂತು. ನಮ್ಮ ಹಿರಿಯರು  ಬೆಲ್ಲದ ಮಹತ್ವವನ್ನು ತಿಳಿದಿದ್ದರು. ನಂತರ ಸಕ್ಕರೆಯನ್ನು ಬ್ರಿಟಿಷರು ಬಳಕೆಗೆ ತಂದರು  ಎಂದು  ಹೇಳಲಾಗುತ್ತದೆ. ನಂತರ ಸಕ್ಕರೆಯ ಬಳಕೆ ಆರಂಭವಾಗಿ ಅಮೃತದಂತಹ ಬೆಲ್ಲದ ಬಳಕೆ ಕಡಿಮೆಯಾಗುತ್ತಾ ಬಂತು.

ಬೆಲ್ಲದಲ್ಲಿ ಎರಡು ವಿಧ.  ಒಂದು ಅರಿಶಿನ ಬಣ್ಣದ ಬೆಲ್ಲ ಇನ್ನೊಂದು ಕಂದು ಬಣ್ಣದ ಬೆಲ್ಲ. ಇದರಲ್ಲಿ ಯಾವುದು ನಮ್ಮ ದೇಹಕ್ಕೆ ಒಳ್ಳೆಯದು ತಿಳಿಯೋಣ ಬನ್ನಿ. ಬೆಲ್ಲದ  ಬಣ್ಣ ಎಷ್ಟು ಗಾಢವಾಗಿರುತ್ತದೊ ಅಷ್ಟು ನಮ್ಮ ದೇಹಕ್ಕೆ ಒಳ್ಳೆಯದು ಆದ್ದರಿಂದ ಕಂದು ಬಣ್ಣದ  ಬೆಲ್ಲ ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.   ಬೆಲ್ಲವನ್ನು ಪ್ರತಿನಿತ್ಯ ಐದು  ಗ್ರಾಂನಷ್ಟು ಆಹಾರದಲ್ಲಿ ಸೇವಿಸುವುದರಿಂದ ರಕ್ತಹೀನತೆ  ಸಮಸ್ಯೆ ದೂರವಾಗುತ್ತದೆ.  ಮತ್ತು ಬೆಲ್ಲದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿರುವುದರಿಂದ ರಕ್ತದಲ್ಲಿ  ಹಿಮೊಗ್ಲೋಬಿನ್ ಉತ್ಪಾದನೆಯಾಗಲು ಸಹಕರಿಸುತ್ತದೆ.  ಸಾಮಾನ್ಯ ಶೀತ ಜ್ವರದ ಲಕ್ಷಣಗಳು ಕಾಣಿಸಿಕೊಂಡಾಗ ಒಂದು ಚಿಕ್ಕ ತುಂಡು  ಬೆಲ್ಲವನ್ನು ಉಗುರು ಬೆಚ್ಚಗಿನ ನೀರನಲ್ಲಿ ಸೇರಿಸಿ  ಕುಡಿಯುವುದರಿಂದ ಇದೆ  ಪ್ರಥಮ ಚಿಕಿತ್ಸೆಯಾಗಿ ಪರಿಣಮಿಸುತ್ತದೆ.

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟವಾದ ನಂತರ ಸ್ವಲ್ಪ ಬೆಲ್ಲವನ್ನು ತಿಂದು ಉಗುರು  ಬೆಚ್ಚಗಿನ ನೀರನ್ನು ಕುಡಿದರೆ ಮುಖದಲ್ಲಿ ಕಾಂತಿ  ಹೆಚ್ಚುತ್ತದೆ. ಬೆಲ್ಲದ ಬಳಕೆಯಿಂದ ನಮ್ಮ ದೇಹದಲ್ಲಿ  ರೋಗ ನಿರೋಧಕ ಶಕ್ತಿ  ಹೆಚ್ಚಾಗುತ್ತದೆ.  ಮುಖದಲ್ಲಿನ ಮೊಡವೆ, ಕಪ್ಪು ಕಲೆಗಳು,  ಕಣ್ಣಿನ ಕೆಳಗಿನ ಡಾರ್ಕ್ ಸರ್ಕಲ್,  ಕಳೆಗುಂದಿದ ಚರ್ಮ,  ಮುಂತಾದ ತೊಂದರೆಗಳನ್ನು ನಿವಾರಿಸಲು ಬೆಲ್ಲವನ್ನು ಸೇವಿಸುವುದು ಒಳ್ಳೆಯದು. ಇಂದಿನ ದಿನಗಳಲ್ಲಿ ಒಂದು ಪ್ರಮುಖ ಸಮಸ್ಯೆ ಎಂದರೆ ಅದು ಕೂದಲಿನ ಸಮಸ್ಯೆ . ಕೂದಲು ಉದುರುವುದು, ಕೂದಲು ಬೇಗನೆ ಬಿಳಿಯಾಗುವುದು ಮತ್ತು ಕೂದಲ ಬೆಳವಣಿಗೆ ಕಡಿಮೆ ಇರುವುದು. ಇದನ್ನು ಸರಿಪಡಿಸಿಕೊಳ್ಳಲು ಪ್ರತಿನಿತ್ಯ ಐದು ಗ್ರಾಂ ಅಷ್ಟು ಬೆಲ್ಲವನ್ನು ತಿಂದು ಒಂದು ಲೋಟ  ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಕೂದಲ ಸಮಸ್ಯೆ ನಿವಾರಣೆಯಾಗುತ್ತದೆ.

ಬೆಲ್ಲವು ನಿದ್ರಾಹೀನತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಖಿನ್ನತೆಯನ್ನು ಕೂಡ ದೂರ ಮಾಡುತ್ತದೆ. ಬೆಲ್ಲದ  ಸೇವನೆಯಿಂದ ಬಾಯಿಯ ದುರ್ವಾಸನೆ ಕೂಡ ನಿವಾರಣೆಯಾಗುತ್ತದೆ.  ಸಕ್ಕರೆಗೆ ಹೋಲಿಸಿದರೆ ಬೆಲ್ಲದಲ್ಲಿ ಕೊಬ್ಬಿನ  ಅಂಶ ಕಡಿಮೆ ಇದೆ.  ಇಷ್ಟೆಲ್ಲಾ  ಉಪಯೋಗವಿರುವ ಬೆಲ್ಲವನ್ನು ಪ್ರತಿನಿತ್ಯ ಸೇವಿಸಿ  ಹಾನಿಕಾರಕವಾದ ಸಕ್ಕರೆಯನ್ನು ಬಳಸುವುದನ್ನು ನಿಲ್ಲಿಸೊಣ.

Related Post

Leave a Comment