ಬಿಳಿ ಕೂದಲು ಶುರುವಾಗಿದೆಯಾ ತಡ ಮಾಡದೇ ಇದನ್ನು ಹಚ್ಚಿ ನ್ಯಾಚುರಲ್ ಆಗಿ ಬಿಳಿ ಕೂದಲು ಕಪ್ಪಾಗುತ್ತೆ ಕೂದಲು ದಟ್ಟವಾಗುತ್ತೆ!

ಮನುಷ್ಯನಿಗೆ ಕೂದಲು ಬಹು ಮುಖ್ಯವಾದುದು. ಕೂದಲು ತಲೆ ತುಂಬಾ ಇದ್ದರೆ ಅವನು ಸುಂದರವಾಗಿ ಕಾಣುತ್ತಾನೆ. ಹೆಣ್ಣು ಮಕ್ಕಳಿಗಂತೂ ಕೂದಲ ಹಾರೈಕೆಗೆ ಬಹಳಷ್ಟು ಶ್ರಮ ಪಡುತ್ತಾರೆ. ಈಗಿನ ವಾತಾವರಣದಲ್ಲಿ ಕೂದಲು ಬಹಳ ಬೇಗ ಉದುರುತ್ತದೆ.

ಗಂಡು ಮಕ್ಕಳ ತಲೆ ಕೂದಲುದರಿ ಬೊಕ್ಕ ತಲೆ ಆಗುತ್ತಿದೆ. ಅದಕ್ಕೆ ಕಾರಣ ವಂಶಪಾರಂಪರ್ಯವೂ ಕಾರಣವಿದೆ ಅದರೂ ನಾವು ಕೂದಲ ಆರೈಕೆ ಬಗ್ಗೆ ಉದಾಸೀನ ತೋರುತ್ತಿರುವುದು. ಕೂದಲಿಗೆ ಸರಿಯಾಗಿ ಪ್ರತಿ ದಿನ ಕೊಬ್ಬರಿ ಎಣ್ಣೆ ಹಾಕಿಕೊಳ್ಳುವುದಿಲ್ಲ. ಅಮ್ಮ ಎಷ್ಟು ಹೇಳಿದರೂ ನಾವು ಕೂದಲು ಒಣಗಿದ್ದರೇ ಚೆನ್ನ ಎಂದು ನೆಗ್ಲೆಟ್ ಮಾಡುತ್ತೇವೆ‌. ಆದರೆ ಈಗಿನ ಕಲುಷಿತ ವಾತಾವರಣದಿಂದ, ನೀರಿನ ಗುಣದಿಂದ, ಬಿಸಿಲ ಬೇಗೆಯ ಕಾರಣ ಕೂದಲು ಬೇಗ ಉದುರುತ್ತದೆ.

ಕೂದಲು ಉದುರುವುದರಿಂದ ಮನುಷ್ಯ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ. ಇನ್ನೊಬ್ಬರ ಎದುರಿಗೆ ಮಾತಾಡಲು ನಾಚಿಕೆ ಪಡುತ್ತೇನೆ. ಬೇರೆಯವರು ಬಾಂಡ್ಲಿ ಎಂದು ಕರೆಯುತ್ತಾರೆ ಎಂದು ವಿವಿಧ ಮೆಡಿಕಲ್ ಔಷಧಿಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾನೆ. ಅದರ ಬದಲಿಗೆ ಮನೆಯಲ್ಲೇ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ನಾವು ಕೂದಲ ಹಾರೈಕೆ ಮಾಡಬಹುದು. ಕೂದಲೂ ಉದುರುವುದನ್ನು ತಡೆಗಟ್ಟಬಹುದು.

ಕರಿಬೇವು ಕೂದಲ ಉದುರುವಿಕೆ ತಡೆಗಟ್ಟುತ್ತೆ. ಅದನ್ನು ಹೇಗೆ ತಯಾರಿಸಬೇಕೆಂದು ಹೇಳ್ತೇವೆ ಕೇಳಿ. ಒಂದು ಬೊಗಸೆ ಕರಿಬೇವನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ತಣ್ಣಗಾದ ಮೇಲೆ ಕೂದಲಿಗೆ ನಿಧಾನವಾಗಿ ಹಚ್ಚಿ ಮೂರ್ನಾಲ್ಕು ನಿಮಿಷಗಳ ಕಾಲ ಮಸಾಜ್ ಮಾಡಿಕೊಳ್ಳಬೇಕು. ನಂತರ ಹತ್ತು ನಿಮಿಷಗಳ ನಂತರ ನೀವು ತಲೆಯನ್ನು ಶುಭ್ರ ಮಾಡಿಕೊಳ್ಳಬೇಕು.

ಕರಿಬೇವಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶಗಳು ಇದ್ದು ಕೂದಲು ದಟ್ಟವಾಗಿ ಬೆಳೆಯಲು ಹಾಗು ಕೂದಲು ಉದುರುವುದು ತಡೆಯಲು ಸಹಕಾರಿಯಾಗುತ್ತದೆ.

ಇನ್ನೊಂದು ಟಿಪ್ಸ್ ಏನೆಂದರೆ, ಅರ್ಧಕ್ಕಿಂತ ಕಡಿಮೆ ಬಟ್ಟಲಿನಷ್ಟು ಕರಿಬೇವಿನ ಪೇಸ್ಟ್ ನ್ನು ಎರಡು ಸ್ಪೂನ್ ಮೊಸರನ್ನು ಕಲಸಿ ಕೂದಲಿನ ಮೂಲಗಳಿಗೆ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿಕೊಳ್ಳಬೇಕು. ಅರ್ದ ಗಂಟೆ ಬಿಟ್ಟು ಕೂದಲನ್ನು ತೊಳೆದುಕೊಳ್ಳಬೇಕು. ಇದು ಕೂದಲು ಚೆನ್ನಾಗಿ ಬೆಳೆಯುವುದಲ್ಲದೇ ತೇವಾಂಶ ಇರುತ್ತದೆ.

ಇನ್ನೊಂದು ಟಿಪ್ಸ್ ಏನೆಂದರೆ ಕರಿಬೇವನ್ನು ಒಣಗಿಸಿ ಪುಡಿ ಮಾಡಿಕೊಂಡು ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಮಿಕ್ಸ್ ಮಾಡಿ ಸ್ವಲ್ಪ ಕಾಯಿಸಬೇಕು. ಅದು ತಣ್ಣಗಾದ ಮೇಲೆ ಅದನ್ನು ಕೂದಲಿಗೆ ಹಚ್ಚಿಕೊಳ್ಳಬೇಕು. ಎರಡು ಗಂಟೆಯ ನಂತರ ಯಾವುದಾದರೂ ಶಾಂಪು ಹಚ್ಚಿ ತೊಳೆದುಕೊಳ್ಳಿ. ಈ ರೀತಿ ಮಾಡಿದರೆ ಕೂದಲು ಕಪ್ಪಾಗಿ ಬೆಳೆಯುತ್ತದೆ

Related Post

Leave a Comment