ಕಾಟನ್ ಬಟ್ಟೆ ಒಗೆಯುವಾಗ ಹೀಗೆ ಮಾಡಿದರೆ ಬಟ್ಟೆ ಹೊಸದರಂತೆ ಇರುತ್ತೆ!ಬಟ್ಟೆ ಚೂರು ಸುಕ್ಕು ಆಗೋಲ್ಲ ಹೊಸದರಂತೆ ಇರುತ್ತೆ!

ಕಾಟನ್ ಬಟ್ಟೆ ಒಗೆಯುವಾಗ ಹೀಗೆ ಮಾಡಿದರೆ ಯಾವಾಗಲು ಕಾಟನ್ ಬಟ್ಟೆ ಯಾವಾಗಲು ಹೊಸದರಂತೆ ಇರುತ್ತದೆ. ಕಾಟನ್ ಸೀರೆ ಕಾಟನ್ ಕುರ್ತೀ ಯಾವುದೇ ಇರಲಿ ಒಗೆಯುವಾಗ ಬರೀ ಇಷ್ಟು ಮಾಡಿ ಸಾಕು. ನಾವೆಲ್ಲರೂ ಮನೆಯಲ್ಲಿ ಕಾಟನ್ ಬಟ್ಟೆಗಳನ್ನು ಬಳಸೆ ಬಳಸುತ್ತೇವೆ. ಎಲ್ಲಾರ ಮನೆಯಲ್ಲಿ ಕಾಟನ್ ಸೀರೆ ಕಾಟನ್ ಕುರ್ತಿ ಇದ್ದೆ ಇರುತ್ತದೆ. ಇನ್ನೂ ಕಾಟನ್ ಬಟ್ಟೆಗಳನ್ನು ಬಳಸುತ್ತಾ ಬಳಸುತ್ತಾ ತುಂಬಾನೇ ಡಲ್ ಆಗಿ ಹೋಗುತ್ತದೆ. ಕಾಟನ್ ಬಟ್ಟೆ ಒಗೆಯುವಾಗ ಈ ಒಂದು ಸಿಂಪಲ್ ಆಗಿರುವ ಟಿಪ್ಸ್ ಅನ್ನು ಫಾಲೋ ಮಾಡಿ ಸಾಕು. ನಿಮ್ಮ ಬಟ್ಟೆ ಹೊಸದರಂತೆ ಆಗುತ್ತದೆ.ಹಿಂದಿನಿಂದಲೂ ಈ ಟ್ರಿಕ್ಸ್ ಅನ್ನು ಬಳಸುತ್ತಾ ಬಂದಿದ್ದೇವೆ.

ಹೊಸದಾಗಿ ತಂದಿರುವ ಕಾಟನ್ ಬಟ್ಟೆಯಲ್ಲಿ ಗಂಜಿ ಇರುತ್ತದೆ. ಆದ್ದರಿಂದ ಇದು ಸ್ಟಿಫ್ ಆಗಿ ಕಾಣಿಸುತ್ತದೆ. ಅದರೆ ನಾವು ಪ್ರತಿದಿನ ಗಂಜಿ ತಿಂದರೆ ಬಳಸುವುದಕ್ಕೆ ಆಗುವುದಿಲ್ಲ. ಹಾಗಾಗಿ ಹೀಗೆ ಮಾಡಿ ನೋಡಿ

ಒಂದು ಪಾತ್ರೆಗೆ ಒಂದು ಲೀಟರ್ ನೀರು ಹಾಕಿಕೊಳ್ಳಿ. ಅದನ್ನು ಬಿಸಿ ಆಗುವುದಕ್ಕೆ ಬಿಡಿ. ನಂತರ ಒಂದು ಚಿಕ್ಕ ಬೌಲ್ ಗೆ ಸ್ವಲ್ಪ ನೀರು ಹಾಕಿಕೊಳ್ಳಿ ಮತ್ತು ಒಂದು ಚಮಚ ಕರ್ನಾ ಫ್ಲೋರ್ ಹಾಕಬೇಕು. ನಂತರ ಇದನ್ನು ಬಿಸಿ ನೀರಿಗೆ ಹಾಕಿ ಚಮಚದಿಂದ ಅಲ್ಲಾಡಿಸಬೇಕು. ಜಾಸ್ತಿ ಕುದಿಸಿದರೆ ಗಟ್ಟಿಯಾಗುತ್ತ ಹೋಗುತ್ತದೆ. ಇದನ್ನು ಅರ್ಧ ಬಕೆಟ್ ನೀರಿಗೆ ಹಾಕಬೇಕು.

ನಂತರ ಬಟ್ಟೆ ತೊಳೆದು ಕಾಟನ್ ಬಟ್ಟೆಯನ್ನು ಇದರಲ್ಲಿ ಡಿಪ್ ಮಾಡಿ ತೆಗೆಯಬೇಕು. ಜಾಸ್ತಿ ಬಟ್ಟೆಯನ್ನು ಇಂಡುವುದು ಬೇಡ. ಕೊನೆಗೆ ಬಟ್ಟೆಯನ್ನು ಬಿಸಿಲಿಗೆ ಒಣಗಿಸಿ ಮತ್ತು ಐರನ್ ಮಾಡಿದರೆ ಹೊಸದರಂತೆ ಕಾಣಿಸುತ್ತದೆ. ಕಾಟನ್ ಬಟ್ಟೆ ಒಗೆಯುವಾಗ ಈ ಟಿಪ್ಸ್ ಅನ್ನು ಫಾಲೋ ಮಾಡಿ ಕಾಟನ್ ಬಟ್ಟೆ ಯಾವಾಗಲು ಹೊಸದರಂತೆ ಇರುತ್ತದೆ.

Related Post

Leave a Comment