ರಕ್ಷಾಬಂಧನ ಆಚರಣೆ ಆಗಸ್ಟ್ 30 or 31ಕ್ಕೂ? ನೂಲು ಹುಣ್ಣಿಮೆ ಯಾವಾಗ?

ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ಹುಣ್ಣಿಮೆ ಪ್ರಾರಂಭವಾಗುತ್ತದೆ. ಆಗಸ್ಟ್ 30ನೇ ತಾರೀಕು ಬೆಳಗ್ಗೆ 10:59 ನಿಮಿಷಕ್ಕೆ ಹುಣ್ಣಿಮೆ ಪ್ರಾರಂಭವಾಗುತ್ತದೆ. ಆಗಸ್ಟ್ 31ನೇ ತಾರೀಕು ಗುರುವಾರ ಬೆಳಗ್ಗೆ 7:06 ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಈ ವರ್ಷದ ರಕ್ಷಾ ಬಂಧನ ಸಮಯದಲ್ಲಿ ಭದ್ರ ಕಾಲದ ನೆರಳು ಇರುತ್ತದೆ.ಹಾಗಾಗಿ ಅಕ್ಕ ತಂಗಿಯರು ಯಾವಾಗ ರಕ್ಷಾ ಬಂಧನವನ್ನು ಕಟ್ಟಬೇಕು ಎನ್ನುವುದನ್ನು ಪೂರ್ತಿಯಾಗಿ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

2023ರಲ್ಲಿ ಬಂದಿರುವ ಈ ರಕ್ಷಾ ಬಂಧನ ಹಲವಾರು ಜನರ ಮನಸ್ಸಲ್ಲಿ ಕೆಲವು ಕನ್ಫ್ಯೂಷನ್ ಗಳು ಇವೆ.ಈ ಬಾರಿ ಶ್ರವಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ ತಿಥಿಯು 30ನೇ ತಾರೀಕು ಆಗಸ್ಟ್ ಮುಂಜಾನೆ ಸಮಯದಲ್ಲಿ 10:59 ನಿಮಿಷಕ್ಕೆ ಶುರುವಾಗುತ್ತದೆ. ಇಲ್ಲಿ ಹುಣ್ಣಿಮೆ ತಿಥಿ ಸಮಾಪ್ತಿಯೂ 31 ಆಗಸ್ಟ್ ದಿನದಂದು ಮುಂಜಾನೆ 7:06 ನಿಮಿಷಕ್ಕೆ ಮುಗಿಯುತ್ತದೆ.

ಇಂತಹ ಸ್ಥಿತಿಯಲ್ಲಿ ರಕ್ಷಾ ಬಂಧನ ಹಬ್ಬವನ್ನು 30 ಆಗಸ್ಟ್ ದಿನದಲ್ಲಿ ಆಚರಿಸಲಾಗುತ್ತದೆ. ಹಾಗಾಗಿ ಆಗಸ್ಟ್ 30 ಹಗಲಿನಲ್ಲಿ ರಾಖಿ ಕಟ್ಟಲು ಸಾಧ್ಯವಾಗುವುದಿಲ್ಲ.ಏಕೆಂದರೆ ಅವತ್ತು ಪೂರ್ತಿಯಾಗಿ ಭದ್ರ ಕಾಲ ಇರುತ್ತದೆ. ಹಾಗಾಗಿ ಆಗಸ್ಟ್ 30 9:03 ಗಂಟೆ ನಂತರ ಅಣ್ಣನ ಕೈಗೆ ರಾಖಿ ಅನ್ನು ಕಟ್ಟಬಹುದು. ಭದ್ರ ಕಾಲವು ರಾತ್ರಿ 9:02 ನಿಮಿಷದವರೆಗೆ ಇರುತ್ತದೆ. ಈ ಸಮಯದಲ್ಲಿ ಕಟ್ಟಬಾರದು. ಇನ್ನು ಆಗಸ್ಟ್ 31 7:05 ನಿಮಿಷಕ್ಕೆ ರಕ್ಷಾ ಬಂಧನ ಮುಗಿಯುತ್ತದೆ.ಈ ಸಮಯವು ಎಲ್ಲಕಿಂತ ಉತ್ತಮ ಸಮಯವಾಗಿದೆ.

ಇನ್ನು ನಿಮ್ಮ ಅಣ್ಣ ತಮ್ಮನನ್ನು ಪಶ್ಚಿಮಕ್ಕೆ ಮುಖ ಮಾಡಿ ಕುರಿಸಿ. ಅವರ ತಲೆಗೆ ಸ್ವಲ್ಪ ಎಣ್ಣೆ ಹಚ್ಚಿ ಹಣೆಗೆ ತಿಲಕವನ್ನು ಇಟ್ಟು ಬಲಗಡೆ ಕೈಗೆ ರಾಖಿಯನ್ನು ಕಟ್ಟಬೇಕಾಗುತ್ತದೆ. ನಂತರ ಕಳಸವನ್ನು ಬೆಳಗಬೇಕಾಗುತ್ತದೆ. ರಾಖಿ ಕಟ್ಟುವ ಮೊದಲು ನಿಮ್ಮ ಅಣ್ಣನ ಕೈಯೆಗೆ ಅಕ್ಷತೆ ಕೊಟ್ಟು ರಾಖಿ ಕಟ್ಟಿದ ತಕ್ಷಣ ಅವರಿಂದ ಆಶೀರ್ವಾದ ತೆಗೆದುಕೊಳ್ಳಬೇಕು. ಇನ್ನು ತಮ್ಮನಿಗೆ ನೀವು ರಾಖಿ ಕಟ್ಟಿದ ತಕ್ಷಣ ಅವರಿಗೆ ನೀವು ಅಕ್ಷತೆ ಹಾಕಿ ಆಶೀರ್ವಾದ ಮಾಡಬೇಕು. ಆದಷ್ಟು ಭದ್ರ ಕಾಲದಲ್ಲಿ ರಾಖಿ ಕಟ್ಟುವುದಕ್ಕೆ ಹೋಗಬೇಡಿ.ಆದಷ್ಟು ಆ ದಿನ ಸಿಹಿಯನ್ನು ಮಾಡಿ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದು.

Related Post

Leave a Comment