ಎಚ್ಚರ ಚರ್ಮ ಹೃದಯಕ್ಕೆ ಒಳ್ಳೆಯದಲ್ಲ!ಮೂಲಂಗಿ ಸೇವಿಸುವ ಮೊದಲು ತಪ್ಪದೆ ಈ ಮಾಹಿತಿ ನೋಡಿ!

ಪೌಷ್ಟಿಕಾಂಶದ ಗಣಿ ಮೂಲಂಗಿ: ಹಲವು ಪೋಷಕಾಂಶಗಳನ್ನು ಹೊಂದಿರುವ ಮೂಲಂಗಿಯು ಮೂಲವ್ಯಾದಿ ಸೇರಿದಂತೆ ಹಲವು ರೋಗಗಳಿಗೆ ಒಳ್ಳೆಯ ಮದ್ದು. ಆದರೆ, ಮೂಲಂಗಿಯನ್ನು ಕೆಲವು ಆಹಾರಗಳ ಜೊತೆ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. ಮೂಲಂಗಿಯನ್ನು ಯಾವ ಆಹಾರಗಳೊಂದಿಗೆ ಸೇವಿಸಬಾರದು ಎಂದು ತಿಳಿಯಿರಿ.

ಹಾಲಿನೊಂದಿಗೆ ಮೂಲಂಗಿಯನ್ನು ಎಂದೂ ಸೇವಿಸಬಾರದು: ಆರೋಗ್ಯ ತಜ್ಞರ ಪ್ರಕಾರ, ಹಾಲಿನೊಂದಿಗೆ ಮೂಲಂಗಿಯನ್ನು ಎಂದೂ ಸೇವಿಸಬಾರದು. ಏಕೆಂದರೆ, ಹಾಲು ಮತ್ತು ಮೂಲಂಗಿಯನ್ನು ಒಟ್ಟಿಗೆ ಸೇವಿಸುವುದರಿಂದ ಗ್ಯಾಸ್ಟ್ರಿಕ್, ಅಸಿಡಿಟಿ, ಹೊಟ್ಟೆ ನೋವು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. 

ಸೌತೆ ಕಾಯಿ ಮತ್ತು ಮೂಲಂಗಿಯನ್ನು ಒಟ್ಟಿಗೆ ತಿನ್ನಬಾರದು:  ನಮ್ಮಲ್ಲಿ ಹಲವರು ಸೌತೆ ಕಾಯಿ ಮತ್ತು ಮೂಲಂಗಿಯನ್ನು ಸಲಾಡ್ ರೂಪದಲ್ಲಿ ಒಟ್ಟಿಗೆ ತಿನ್ನುತ್ತಾರೆ. ಆದರೆ, ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ವಾಸ್ತವವಾಗಿ ಸೌತೆಕಾಯಿಯು ಆಸ್ಕೋರ್ಬೇಟ್ ಅನ್ನು ಹೊಂದಿರುತ್ತದೆ, ಇದು ವಿಟಮಿನ್ ಸಿ ಅನ್ನು ಹೀರಿಕೊಳ್ಳುತ್ತದೆ. ಅದಕ್ಕಾಗಿಯೇ ಸೌತೆಕಾಯಿಯನ್ನು ಮೂಲಂಗಿಯೊಂದಿಗೆ ತಿನ್ನಬಾರದು.

ಕಿತ್ತಳೆಹಣ್ಣಿನ ಸೇವನೆ ಬಳಿಕ ಮೂಲಂಗಿ:  ಕೆಲವರು ಮೂಲಂಗಿ ಸೇವಿಸಿದ ಬಳಿಕ ಕಿತ್ತಳೆ ಹಣ್ಣು ಇದ್ದರೆ ಅದನ್ನೂ ತಿನ್ನುತ್ತಾರೆ. ಆದರೆ,  ಕಿತ್ತಳೆ ಮತ್ತು ಮೂಲಂಗಿಯನ್ನು ಒಟ್ಟಿಗೆ ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ.

ಚಹಾದೊಂದಿಗೆ ಮೂಲಂಗಿ: ವೈದ್ಯರ ಪ್ರಕಾರ, ಚಹಾ ಮತ್ತು ಮೂಲಂಗಿಯನ್ನು ಒಟ್ಟಿಗೆ ಸೇವಿಸಬಾರದು. ಮೂಲಂಗಿಯು ಸ್ವಭಾವತಃ ತಂಪಾಗಿರುತ್ತದೆ. ಚಹಾವು ಉಷ್ಣತೆಯ ಸ್ವಾಭಾವದ್ದಾಗಿದೆ. ಇವೆರಡನ್ನೂ ಒಟ್ಟಿಗೆ ಸೇವಿಸುವುದರಿಂದ ಅಸಿಡಿಟಿ, ಮಲಬದ್ದತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

Related Post

Leave a Comment