ಕಿವಿ ಮೂಗು ಚುಚ್ಚಿ ಗಾಯ ಆಗಿದೀಯ!

ಮಗುವಿಗೆ ಕಿವಿ ಚುಚ್ಚಿಸುವುದು ಹಾಗೂ ಸ್ವಲ್ಪ ದೊಡ್ಡವರಾದ ನಂತರ ಹೆಣ್ಮಕ್ಕಳಿಗೆ ಮೂಗು ಚುಚ್ಚಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಮೂಗಿಗೆ ಮೂಗು ನತ್ತು ಹಾಕಲು ಹಾಗೂ ಕಿವಿಗೆ ಕಿವಿಯೋಲೆ ಹಾಕಲು ಕಿವಿ ಹಾಗೂ ಮೂಗನ್ನು ಚುಚ್ಚಿಸಲೇ ಬೇಕಾಗುತ್ತದೆ. ಅದರಲ್ಲೂ ಕೆಲವರನ್ನು ಮೂಗು ಚುಚ್ಚಿಸುವುದಿಲ್ಲ. ಆದರೆ ಇದೀಗ ಫ್ಯಾಶನ್ ಹೆಸರಲ್ಲಿ ಕಿವಿ ಚುಚ್ಚುವುದು ಈಗ ಕ್ರೇಜ್ ಆಗಿಬಿಟ್ಟಿದೆ. ಬರೀ ಮೂಗು, ಕಿವಿ ಮಾತ್ರವಲ್ಲ ದೇಹದ ವಿವಿಧ ಅಂಗಗಳನ್ನು ಚುಚ್ಚಿಸುತ್ತಾರೆ. ಕಿವಿ ಅಥವಾ ಮೂಗು ಚುಚ್ಚಿಸುವ ಮೊದಲು ಈ ವಿಷ್ಯಗಳ ಬಗ್ಗೆ ಗಮನವಿರಲಿ.

​ಚರ್ಮ ನಾಜೂಕಾಗಿರುತ್ತದೆ

ನಿಮ್ಮ ಚರ್ಮವು ತುಂಬಾ ಸೂಕ್ಷ್ಮವಾಗಿರುತ್ತದೆ. ಆದ್ದರಿಂದ ನಿಮ್ಮ ಮೂಗು ಮತ್ತು ಕಿವಿಗಳನ್ನು ಚುಚ್ಚುವ ಮೊದಲು, ಸೋಂಕು ಉಂಟುಮಾಡದಿರುವಂತೆ ನೀವು ಕಾಳಜಿ ವಹಿಸಬೇಕು. ನೀವು ಚುಚ್ಚಿಸುವ ಜಾಗದಲ್ಲಿ ಮೊಡವೆಗಳಾಗಿದ್ದರೆ ಅಥವಾ ಅಲ್ಲಿನ ಚರ್ಮದಲ್ಲಿ ಯಾವುದೇ ರೀತಿಯ ಅಲರ್ಜಿಗಳಾಗಿದ್ದರೆ ಕೆಲವು ಸಮಯದ ವರೆಗೆ ಚುಚ್ಚುವ ಕಾರ್ಯವನ್ನು ಮುಂದೂಡಿ.

​ಚುಚ್ಚಿದ ಜಾಗದಲ್ಲಿ ಗುಳ್ಳೆಗಳಾಗುವುದು

ಯಾವಾಗಲೂ ಶುದ್ಧ ಚರ್ಮದ ಮೇಲೆ ಮಾತ್ರ ಚುಚ್ಚುವಿಕೆಯನ್ನು ಮಾಡಬೇಕು. ಮೂಗು-ಕಿವಿ ಅಥವಾ ದೇಹದ ಯಾವುದೇ ಅಂಗಗಳ ಚುಚ್ಚುವ ಸಮಯದಲ್ಲಿ ಯಾವುದೇ ಸಮಸ್ಯೆ ಉಂಟಾದರೆ, ನಿಮ್ಮ ದೇಹವು ತಕ್ಷಣವೇ ಪ್ರತಿಕ್ರಿಯಿಸುತ್ತದೆ. ಚುಚ್ಚಿದ ಸ್ಥಳದಲ್ಲಿ ಊತ ಇರಬಹುದು. ಚರ್ಮದ ಕಿರಿಕಿರಿ, ತುರಿಕೆ, ಹುಣ್ಣುಗಳು ಅಥವಾ ಗುಳ್ಳೆಗಳು ಮೂಡಬಹುದು. ಇವೆಲ್ಲವೂ ಚುಚ್ಚುವಿಕೆ ಸರಿಯಾಗಿ ನಡೆದಿಲ್ಲ ಎನ್ನುವುದರ ಚಿಹ್ನೆಗಳು.

​ಆರು ವಾರಗಳು ಬೇಕಾಗಬಹುದು

ಚುಚ್ಚುವಿಕೆಯು ಮೂಲಭೂತವಾಗಿ ತೆರೆದ ಗಾಯವಾಗಿದೆ. ಕಿವಿ ಚುಚ್ಚುವಿಕೆಯು ಗುಣವಾಗಲು ಸಾಮಾನ್ಯವಾಗಿ ಆರರಿಂದ ಎಂಟು ವಾರಗಳನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಕಿವಿಯ ಗಟ್ಟಿಯಾದ ಭಾಗದಲ್ಲಿ ನಡೆಯುವ ಕಾರ್ಟಿಲೆಜ್ ಚುಚ್ಚುವಿಕೆಗಳು ಸಾಮಾನ್ಯವಾಗಿ ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಹೆಚ್ಚು ಸೋಂಕಿಗೆ ಒಳಗಾಗುವ ಸಾಧ್ಯತೆಗಳಿವೆ.

ಯಾವುದೇ ಬ್ಯಾಕ್ಟೀರಿಯಾವನ್ನು ಹುದುಗಿಸಲು ಬಿಟ್ಟರೆ ಅದು ತ್ವರಿತವಾಗಿ ಸೋಂಕಾಗಿ ಬದಲಾಗಬಹುದು. ಕೊಳಕು ಕೈಗಳು ಅಥವಾ ಉಪಕರಣಗಳಿಂದ ನಿಮ್ಮ ಚುಚ್ಚಿದ ಜಾಗವನ್ನು ಸ್ಪರ್ಶಿಸಿದರೆ ಸೋಂಕು ಉಂಟಾಗುತ್ತದೆ.

​ಚುಚ್ಚಿದ ನಂತರ ಹೀಗೆ ಮಾಡಿ

ಚುಚ್ಚಿದ ಪ್ರದೇಶಕ್ಕೆ ತಕ್ಷಣ ಅರಿಶಿನ ಹಚ್ಚಿಕೊಳ್ಳಿ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇಲ್ಲವಾದರೆ ಬ್ಯಾಕ್ಟೀರಿಯಾ ವಿರೋಧಿ ಕ್ರೀಮ್ ಅನ್ನು ಹಚ್ಚಿರಿ. ಇದರಿಂದ ಸೋಂಕಿನ ಅಪಾಯವಿರುವುದಿಲ್ಲಅಥವಾ ಕಡಿಮೆಯಾಗುತ್ತದೆ.

ಉತ್ತಮ ಕ್ಲೆನ್ಸರ್ ಬಗ್ಗೆ ನಿಮ್ಮ ವೈದ್ಯರನ್ನು ಕೇಳಿ ಮತ್ತು ದಿನಕ್ಕೆ ಎರಡು ಬಾರಿ ಕ್ಲೆನ್ಸರ್‌ನಿಂದ ಚುಚ್ಚಿದ ಪ್ರದೇಶವನ್ನು ಸ್ವಚ್ಛಗೊಳಿಸಿ. ಧೂಳು ಮತ್ತು ಮಣ್ಣು ಚರ್ಮಕ್ಕೆ ಅಂಟಿಕೊಳ್ಳುವುದರಿಂದ ಸೋಂಕು ಕೂಡ ಸಂಭವಿಸಬಹುದು.

​ಚುಚ್ಚಿದ ಸ್ಥಳದ ಬಗ್ಗೆ ಜಾಗರೂಕರಾಗಿರಿ

ಸ್ನಾನ ಮಾಡುವಾಗ ಅಥವಾ ಬಟ್ಟೆ ಬದಲಾಯಿಸುವಾಗ, ಕಿವಿಯೋಲೆ ನಿಮ್ಮ ಟವೆಲ್ ಅಥವಾ ಬಟ್ಟೆಯಲ್ಲಿ ಸಿಲುಕಿಕೊಳ್ಳದಂತೆ ನೋಡಿಕೊಳ್ಳಿ. ಆರಂಭದಲ್ಲಿ ಅಭ್ಯಾಸದ ಕೊರತೆಯಿಂದಾಗಿ, ಚುಚ್ಚಿದ ಸ್ಥಳದಲ್ಲಿ ತೀವ್ರವಾದ ನೋವು ಉಂಟಾಗುತ್ತದೆ. ಹಾಗಾಗಿ ಬಟ್ಟೆಗೆ ಸಿಲುಕಿದರೆ ಎಳೆಯುವ ರಭಸದಲ್ಲಿ ರಕ್ತ ಬರಲೂ ಬಹುದು.

ನೀವು ಇತ್ತೀಚೆಗೆ ನಿಮ್ಮ ಮೂಗು ಅಥವಾ ಕಿವಿಯನ್ನು ಚುಚ್ಚಿದ್ದರೆ, ಭಾರವಾದ ಆಭರಣಗಳನ್ನು ಹಾಕಬೇಡಿ. ಲೋಹದ ಆಭರಣಗಳನ್ನು ಧರಿಸುವುದನ್ನು ತಪ್ಪಿಸಿ. ಇದು ನಿಮ್ಮ ಚರ್ಮದೊಂದಿಗೆ ಪ್ರತಿಕ್ರಿಯಿಸಬಹುದು. ಇದು ಅಲರ್ಜಿಯನ್ನು ಉಂಟುಮಾಡಬಹುದು.

ನೀವು ತಕ್ಷಣ ಚುಚ್ಚುವಿಕೆಯನ್ನು ಮಾಡಿದ್ದರೆ, ಆ ಸ್ಥಳವನ್ನು ಮತ್ತೆ ಮತ್ತೆ ಮುಟ್ಟಬೇಡಿ. ಕಿವಿಯೋಲೆ ಅಥವಾ ಮೂಗುತಿಯನ್ನು ಎಳೆಯಲು ಪ್ರಯತ್ನಿಸಬೇಡಿ.

Related Post

Leave a Comment