ದೇಹ ಮತ್ತು ಬಾಯಿಯ ಕೆಟ್ಟ ವಾಸನೆಗೆ ಮನೆಮದ್ದು!

ಹೆಣ್ಣು ಮಕ್ಕಳ ಅತಿಯಾದ ಬೆವರಿನ ವಾಸನೆಯ ಸಮಸ್ಸೆ ಕಂಡು ಬರುತ್ತದೆ. ಇದಕ್ಕೆ ಮುಖ್ಯ ಕಾರಣ ಆಜೀರ್ಣ ಮಲಬದ್ಧತೆ, ಅಧಿಕವಾದ ತೂಕ,ಮಾನಸಿಕ ಒತ್ತಡ, ಸರಿಯಾಗಿ ಸ್ವಚ್ಛತೆಯ ಕೊರತೆಯನ್ನು ಎದುರಿಸುತ್ತಿರುವವರು ಈ ಸಮಸ್ಸೇಗೆ ಒಳಗಾಗಬೇಕಾಗುತ್ತದೆ. ಅಷ್ಟೇ ಅಲ್ಲದೆ ಟೈಟ್ ಉಡುಗೆ ಧರಿಸಿದರು ಕೂಡ ದೇಹದಲ್ಲಿ ವಾಸನೆ ಕಂಡು ಬರುತ್ತದೆ. ದೇಹದ ಕೆಟ್ಟ ವಾಸನೆ ಕಡಿಮೆ ಆಗಬೇಕು ಎಂದರೆ ಮೊದಲು ಇದನ್ನೆಲ್ಲಾ ಸರಿ ಮಾಡಿಕೊಳ್ಳಬೇಕು.

ಸ್ನಾನಕ್ಕೆ ಕಡಲೆಹಿಟ್ಟು ಉದ್ದಿನ ಹಿಟ್ಟು, ಜೋಳದ ಹಿಟ್ಟು, ಹೆಸರು ಕಾಳಿನ ಹಿಟ್ಟು, ಸಿಗೆಕಾಯಿ ಪುಡಿ, ಮೆಂತೆ ಪುಡಿ ಯಿಂದ ಸ್ನಾನ ಮಾಡಬಹುದು. ಮೆಂತೆ ಪುಡಿ ಮತ್ತು ಕಾಲು ಕೆಜಿ ಅರಿಶಿಣ ಮತ್ತು 3 ಕೆಜಿ ಕಡಲೆಹಿಟ್ಟು ಬೆರೆಸಿ ಚೂರಣ ಮಾಡಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು. ಇದನ್ನು ಸ್ನಾನಕ್ಕೆ ಬಳಸಿದರೆ ಶರೀರದಲ್ಲಿ ಕೆಟ್ಟ ವಾಸನೆ ಕಡಿಮೆ ಆಗುತ್ತವೆ ಮತ್ತು ಚರ್ಮದ ಇಂಫಕ್ಷನ್ ಕೂಡ ಕಡಿಮೆ ಆಗುತ್ತವೆ.

ಇನ್ನು ದೇಹದಲ್ಲಿ ಕೆಟ್ಟ ವಾಸನೆ ಬರುತ್ತಿದ್ದರೆ ಜೇನುತುಪ್ಪ ಮತ್ತು ಕಮಲದ ಹೂವಿನ ಎಲೆ, ದಾಳಿಂಬೆ ಬೀಜ ಹಾಗು ಲೋದ್ರಾ. ಇದನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮೀಕ್ಸಿ ಗೆ ಹಾಕಿ ಪೇಸ್ಟ್ ತರ ಮಾಡಬೇಕು. ಆ ಪೇಸ್ಟ್ ಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿಕೊಳ್ಳಬೇಕು. ಇದನ್ನು ಮೈಗೆಲ್ಲ ಹಚ್ಚಿ ಚೆನ್ನಾಗಿ ಮಾಸಜ್ ಮಾಡಬೇಕು. ಬೆಳಗ್ಗೆ ಸೂರ್ಯನ ಎಳೆ ಬಿಸಿಲಿಗೆ ನಿಲ್ಲಬೇಕು. ಹೀಗೆ ನಿಂತು ಸ್ನಾನ ಮಾಡಿದರೆ ಕೇವಲ 21 ದಿನದಲ್ಲಿ ನಿಮ್ಮ ಶರೀರದಲ್ಲಿ ಇರುವಂತಹ ಬೆವರಿನ ಕೆಟ್ಟ ವಾಸನೆ ಸಂಪೂರ್ಣವಾಗಿ ಕಡಿಮೆ ಆಗುತ್ತದೆ.

Related Post

Leave a Comment